Cyclone Ditwah : ದ್ವಿತ್ವಾʼ ಚಂಡಮಾರುತದ ಪ್ರಭಾವದಿಂದ ಬೆಂಗಳೂರು ನಗರದಲ್ಲಿ ವಿಪರೀತ ಚಳಿ ಆಗುತ್ತಿದೆ. ಕೇವಲ ಮುಂಜಾನೆ, ಸಂಜೆ ಅಲ್ಲದೇ ದಿನವಿಡಿಯೂ ಕಳೆದೆರಡು ದಿನದಿಂದ ಮೋಡ ತುಂಬಿದ್ದು, ಇವತ್ತೂ ಕೂಡಾ ಇದೇ ವಾತಾವರಣ ಕಂಡುಬಂದಿದೆ.

Cyclone Ditwah: ದ್ವಿತ್ವಾ ಚಂಡಮಾರುತದ ಪರಿಣಾಮ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಕಳೆದ ಎರಡು ದಿನಗಳಿಂದ ತೀವ್ರ ಚಳಿ, ಮೋಡಾವೃತ ವಾತಾವರಣ ಹಾಗೂ ತುಂತುರು ಮಳೆ ಮುಂದುವರಿದೆ.
ದ್ವಿತ್ವಾ ಎಫೆಕ್ಟ್ ಇನ್ನೂ 3 ದಿನ ಹೀಗೆ ಮೈ ಕೊರೆವ ಚಳಿ!
ಮುಂಜಾನೆ–ಸಂಜೆ ಮಾತ್ರವಲ್ಲದೆ ದಿನವಿಡೀ ತಂಪಾದ ವಾತಾವರಣ ಕಾಣಿಸಿಕೊಂಡಿದ್ದು, ಜನರು ನವೆಂಬರ್ ಅಂತ್ಯದಷ್ಟೇ ಡಿಸೆಂಬರ್ ಮೊದಲ ವಾರದಲ್ಲೇ ಶೀತ ಅನುಭವಿಸುತ್ತಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಮೈಕೊರೆಯುವ ಗಾಳಿ, ಅಲ್ಲಲ್ಲಿ ಹಗುರ ಮಳೆ, ನಿರಂತರ ಮೋಡ ಕವಿದ ವಾತಾವರಣ ಕಂಡುಬಂದಿದೆ.
ಬೆಂಗಳೂರಿಗೆ ಹವಾಮಾನ ಇಲಾಖೆಯ ಮಳೆಯ ಎಚ್ಚರಿಕೆ
ಭಾರತೀಯ ಹವಾಮಾನ ಇಲಾಖೆ (IMD) ದ್ವಿತ್ವಾ ಚಂಡಮಾರುತದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಿಗೆ ಹಗುರದಿಂದ ಮಧ್ಯಮ ಮಟ್ಟದ ಮಳೆಯ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : Ditwah Cyclone: ತಮಿಳುನಾಡಿನತ್ತ ದಿತ್ವಾ ಚಂಡಮಾರುತ- IMD ರೆಡ್ ಅಲರ್ಟ್!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
ಕೆಳಗಿನ ಜಿಲ್ಲೆಗಳಲ್ಲಿ ಮುಂದಿನ 48–72 ಗಂಟೆಗಳೊಳಗೆ ಲಘು–ಮಧ್ಯಮ ಮಳೆ ಸಂಭವಿಸುವ ಸಾಧ್ಯತೆ ಇದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ/ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮೋಡಾವೃತ–ಚಳಿ ವಾತಾವರಣ ಮುಂದುವರೆಯಲಿದೆ ಎಂದು IMD ತಿಳಿಸಿದೆ.
ತಾಪಮಾನದಲ್ಲಿ ತೀವ್ರ ಇಳಿಕೆ
ಬೆಂಗಳೂರು ನಗರದಲ್ಲಿ ತಾಪಮಾನ ಇಂದು ಮತ್ತು ಮುಂದಿನ ಮೂರು ದಿನಗಳ ಕಾಲ ಸ್ಪಷ್ಟವಾಗಿ ಕಡಿಮೆಯಾಗಲಿದೆ. ಗರಿಷ್ಠ ಉಷ್ಣಾಂಶ: 22°C, ಕನಿಷ್ಠ ಉಷ್ಣಾಂಶ: 18°C ಹೀಗಾಗಿ ಮುಂದಿನ ಮೂರು ದಿನ ಚಳಿ–ಮಳೆ ಮುಂದುವರಿಕೆ.
MUST WATCH: ದಿತ್ವಾ ಚಂಡಮಾರುತದ ಎಫೆಕ್ಟ್- ತುಮಕೂರಿನಲ್ಲಿ ಕ್ಲೈಮೆಟ್ ಹೇಗಿದೆ ಗೊತ್ತಾ..?




