Ditwah Cyclone: ದಿತ್ವಾ ಚಂಡಮಾರುತವು ಶ್ರೀಲಂಕಾವನ್ನು ದಾಟಿದ ನಂತರ ಮುಂದಿನ 48 ಗಂಟೆಗಳಲ್ಲಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ.

Ditwah Cyclone: ಬಂಗಾಳಕೊಲ್ಲಿಯಲ್ಲಿ ‘ದಿತ್ವಾ’ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ತಮಿಳುನಾಡು ಹಾಗೂ ಪುದುಚೇರಿ ಕರಾವಳಿಯನ್ನು ಸಮೀಪಿಸುತ್ತಿದೆ ಎಂದು IMD ಎಚ್ಚರಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ, ವೇಗವಾದ ಬಿರುಗಾಳಿ ಮತ್ತು ಪ್ರವಾಹದ ಅಪಾಯವನ್ನು ಸೂಚಿಸಿದೆ.
ತಮಿಳುನಾಡು–ಪುದುಚೇರಿಯಲ್ಲಿ ಅಲರ್ಟ್!
ದಿತ್ವಾ ಚಂಡಮಾರುತವು ಕಾರೈಕಲ್ನಿಂದ ಸುಮಾರು 220 ಕಿ.ಮೀ ದೂರದಲ್ಲಿದೆ. ನವೆಂಬರ್ 30ರ ಮುಂಜಾನೆ ವೇಳೆಗೆ ಉತ್ತರ ತಮಿಳುನಾಡು – ಪುದುಚೇರಿ ಕರಾವಳಿಯತ್ತ ತಲುಪಲಿದೆ.
ಇದನ್ನೂ ಓದಿ: Tripuranta Lake bursts due to heavy rain in Basavakalyana! ಬೀದರ್ ನಲ್ಲಿ ಪ್ರವಾಹ ಪರಿಸ್ಥಿತಿ
ಕರಾವಳಿ ರಾಜ್ಯಗಳಿಗೆ ಐಎಂಡಿ ಎಚ್ಚರಿಕೆ
ಇದರಿಂದಾಗಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ, ಬಿರುಗಾಳಿ ಮತ್ತು ಪ್ರವಾಹದ ಅಪಾಯ ಏರಿಕೆಯಾಗಿದೆ. ಇಂದಿನಿಂದ ಡಿಸೆಂಬರ್ 1ರವರೆಗೆ ಕರಾವಳಿ ಆಂಧ್ರಪ್ರದೇಶ, ಯಾನಂ ಹಾಗೂ ರಾಯಲಸೀಮಾ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ,

ನವೆಂಬರ್ 30ರಂದು ದಕ್ಷಿಣ ಕರಾವಳಿ ಆಂಧ್ರಪ್ರದೇಶದಲ್ಲಿ ಅತಿಭಾರೀ ಮಳೆ ಇರಬಹುದು ಎಂದು ಐಎಂಡಿ ತಿಳಿಸಿದೆ.
ದಿತ್ವಾ ಚಂಡಮಾರುತ: ತಮಿಳುನಾಡಿನಲ್ಲಿ ರೆಡ್ ಅಲರ್ಟ್
ತಮಿಳುನಾಡಿನ ಹಲವೆಡೆ ಎಚ್ಚರಿಕೆಗಳನ್ನು ಘೋಷಿಸಲಾಗಿದ್ದು, ಪುದುಚೇರಿ, ಕಡಲೂರು, ಮೈಲಾಡುತುರೈ, ವಿಲ್ಲುಪುರಂ ಮತ್ತು ಚೆಂಗಲ್ಪಟ್ಟಿಗೆ ರೆಡ್ ಅಲರ್ಟ್ ಜಾರಿಯಾಗಿದೆ. ಚೆನ್ನೈ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿಘ್ನ ಉಂಟಾಗಿ, ಇಂದು ನಿಗದಿಯಾಗಿದ್ದ ಒಟ್ಟು 54 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
54 ವಿಮಾನಗಳು ರದ್ದು
ಚೆನ್ನೈ–ತೂತುಕುಡಿ, ಮಧುರೈ, ತಿರುಚ್ಚಿ ಮಾರ್ಗಗಳಲ್ಲಿ 16 ವಿಮಾನಗಳು ಹಾಗೂ ತಿರುಗುವ ಮಾರ್ಗದಲ್ಲೂ 16 ವಿಮಾನಗಳು ಸ್ಥಗಿತಗೊಂಡಿವೆ. ಜೊತೆಗೆ ಮಧುರೈ, ತಿರುಚ್ಚಿ ಮತ್ತು ಪುದುಚೇರಿಯಿಂದ ಬೆಂಗಳೂರು ಹಾಗೂ ಹೈದರಾಬಾದ್ಗೆ ತೆರಳಬೇಕಿದ್ದ 22 ವಿಮಾನಗಳು ರದ್ದಾಗಿವೆ.
MUST WATCH: ಡಿಸೆಂಬರ್ಗೂ ಮುನ್ನವೇ ಭೀಕರ ಚಳಿ ಶುರು- ವೆದರ್ ಚೇಂಜ್ನಿಂದ ಜನರು ಹೈರಾಣು




