Viral Video : ಏರ್ಪೋರ್ಟ್ ರೋಡ್ನಲ್ಲಿ ಯುವಕರ ಅಪಾಯಕಾರಿ ಮಚ್ಚು–ವೀಲಿಂಗ್ ವಿಡಿಯೋ ವೈರಲ್; ಸಾರ್ವಜನಿಕರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ.

Viral Video : ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ಮೇಲೆ ಅಪಾಯಕಾರಿ ವೀಲಿಂಗ್ ಮಾಡಿ, ಕೈಯಲ್ಲಿ ಮಚ್ಚು ಹಿಡಿದು ರೋಡ್ಗೆ ತಾಗಿಸುತ್ತಿರುವ ಯುವಕರ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ದೃಶ್ಯಗಳು ಕಾನೂನು ಸುವ್ಯವಸ್ಥೆ ಕುರಿತ ಚರ್ಚೆಗೆ ಹೊಸ ದಿಕ್ಕು ತೆರೆದಿವೆ.
ಮಚ್ಚು ಹಿಡಿದು ವೀಲಿಂಗ್ – ವೈರಲ್ ವಿಡಿಯೋ ಹುಟ್ಟಿಸಿದ ಭಯ
ವೈರಲ್ ವಿಡಿಯೋದಲ್ಲಿ ಕೆಲ ಯುವಕರು , ವೇಗದ ಬೈಕ್ಗಳಲ್ಲಿ ವೀಲಿಂಗ್ ಮಾಡುತ್ತಾ ಕೈಯಲ್ಲಿದ್ದ ಮಚ್ಚನ್ನು ರಸ್ತೆಗೆ ಅಪ್ಪಳಿಸುತ್ತಾ ಸುತ್ತಮುತ್ತಲಿನ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಸ್ಥಳೀಯರು ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು Instagram ಸೇರಿದಂತೆ ಹಲವು ಪ್ಲಾಟ್ಫಾರ್ಮ್ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜನರಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು
ಈ ಘಟನೆ ಬಳಿಕ ಜನತೆ ಪೊಲೀಸ್ ಇಲಾಖೆಯ ಮೇಲೆ ಪ್ರಶ್ನೆಗಳ ಮಳೆ ಹರಿಸಿದ್ದಾರೆ.ಸಾರ್ವಜನಿಕ ರಸ್ತೆಯಲ್ಲಿ ಇಂತಹ ಅಪಾಯಕಾರಿ ಸ್ಟಂಟ್ಗಳು , ಮಚ್ಚಿನ ಬಳಕೆ ,ಹೆಲ್ಮೆಟ್ ಇಲ್ಲದ ಚಾಲನೆ
ಇದನ್ನೂ ಓದಿ: Accident: ಹೊಸ ಕಾರು ಡೆಲಿವರಿ ಪಡೆದ 24 ಗಂಟೆಯಲ್ಲೇ ಅಪಘಾತವಾಗಿ ಡ್ಯಾನ್ಸರ್ ಸಾವು..!
ಇವೆಲ್ಲವೂ ಸಾಮಾನ್ಯ ನಾಗರಿಕರ ಜೀವಕ್ಕೆ ಅಪಾಯ ತಂದೊಡ್ಡುವಂತಿವೆ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಇಂತಹ ಘಟನೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನತೆ ಆತಂಕಗೊಂಡಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ, ರಸ್ತೆಯಲ್ಲಿ ವೀಲಿಂಗ್ ಮಾಡುವ ಯುವಕರ ವರ್ತನೆ ಪಾದಚಾರಿಗಳು ಮತ್ತು ವಾಹನ ಸವಾರರ ಜೀವಕ್ಕೆ ನೇರ ಬೆದರಿಕೆಯಾಗುತ್ತಿದೆ.
MUST WATCH: NELAMANGALA | ACCI**NT | VOLVO CAR | ಭೀಕರ ಅಪ**ತ- ಒಂದೇ ಕುಟುಂಬದ 6 ಮಂದಿ ಧಾರುಣ ಸಾ*




