Sira: ಶಿರಾ ದೊಡ್ಡ ಕೆರೆಯಲ್ಲಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಸುತ್ತಮುತ್ತಲ ನಿವಾಸಿಗಳನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.

Sira: ಶಿರಾ ನಗರದ ದೊಡ್ಡಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು,. ವಾಕಿಂಗ್ಗೆ ಹೋದ ಸ್ಥಳೀಯರು ಶವವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಯುವಕರು ತೇಲುತ್ತಿರುವ ಶವವನ್ನು ಕೆರೆಯಿಂದ ಹೊರ ತೆಗೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿರಾದ ದೊಡ್ಡ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಸದ್ಯ, ಮೃತನ ವಯಸ್ಸು ಸುಮಾರು 30–40 ವರ್ಷಗಳ ನಡುವೆ ಇರಬಹುದು ಎನ್ನಲಾಗಿದೆ. ಶವವು ಸುಮಾರು ಮೂರು–ನಾಲ್ಕು ದಿನಗಳ ಹಿಂದೆ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು, ಇಂದು ಕೆರೆಯಲ್ಲಿ ಮೃತದೇಹ ತೇಲಿರುವ ಸಾಧ್ಯತೆ ಇದೆ.
ಇದನ್ನು ಓದಿ: Sira News | Mysterious Death | ರಸ್ತೆ ಬದಿಯ ಪೊದೆಯಲ್ಲಿ ಯುವಕನ ಶವ ಪತ್ತೆ..!
ಆತ್ಮಹತ್ಯೆ..? ಅಥವಾ ಕೊಲೆನಾ?
ಸದ್ಯ ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಆತ್ಮಹತ್ಯೆಯೋ..?, ಕೊಲೆನಾ..? ಅಥವಾ ಕಾಲು ಜಾರಿ ಕೆರೆಗೆ ಬಿದ್ದಿದ್ದಾರಾ ಎಂಬ ಪ್ರಶ್ನೆಗಳ ಕುರಿತು ತನಿಖೆ ನಡೆಯುತ್ತಿದೆ.
ಮೃತನ ಬಲಗೈಯಲ್ಲಿ ಮಂಗಳ ಗುರುತು ಇದ್ದು, ಈ ಗುರುತು ಆಧರಿಸಿ ಮೃತಪಟ್ಟಿರೋ ವ್ಯಕ್ತಿ ಯಾರೆಂದು ಕಂಡುಹಿಡಿಯಲು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಶಿರಾ ಪೊಲೀಸರ ತನಿಖೆ ಆರಂಭ
ಸದ್ಯ ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
MUST WATCH: SIRA | ಪೊದೆಯಲ್ಲಿ ವ್ಯಕ್ತಿಯ ಮೃ*ದೇಹ ಪತ್ತೆ ಕೊಳೆತ ಶ* ಕಂಡು ಬೆಚ್ಚಿ ಬಿದ್ದ ಜನರು




