Cricket : ಇಂಡೋ-ಆಫ್ರಿಕಾ ಒನ್ ಡೇ ಸೀರಿಸ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಈ ಸರಣಿ ಆರಂಭಕ್ಕೂ ಮುನ್ನವೇ ಅಂತ್ಯದ ಬಗ್ಗೆ ಚರ್ಚೆ ಆರಂಭವಾಗಿದೆ.

Cricket: ಫೆಬ್ರವರಿಯಲ್ಲಿ ಭಾರತದ ನೆಲದಲ್ಲಿ ನಡೆದ ಏಕದಿನ ಸರಣಿಯ ಬಳಿಕ ದೀರ್ಘಕಾಲ ತಂಡದಿಂದ ದೂರವಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಈಗ ಮತ್ತೆ ಬ್ಲ್ಯೂ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.
2027ರ ಏಕದಿನ ವಿಶ್ವಕಪ್ಗೆ ಬಿಸಿಸಿಐ ಗಂಭೀರ ತಯಾರಿ
2026ರ ಟಿ20 ವಿಶ್ವಕಪ್ಗಿಂತ 2027ರ ಒನ್ ಡೇ ವಿಶ್ವಕಪ್ಗೆ ಬಿಸಿಸಿಐ ದೊಡ್ಡ ಆದ್ಯತೆ ನೀಡಿದ್ದು, ಟೂರ್ನಿಗೆ ಸಂಬಂಧಿಸಿದ ಬ್ಲ್ಯೂಪ್ರಿಂಟ್ ಸಿದ್ಧಪಡಿಸುವ ಕೆಲಸ ಶುರುವಾಗಿದೆ.
ಡಿಸೆಂಬರ್ 6ರ ಬಳಿಕ ಅಹ್ಮದಾಬಾದ್ನಲ್ಲಿ ಹೈವೋಲ್ಟೇಜ್ ಸಭೆ
ಇಂಡೋ–ಆಫ್ರಿಕಾ ಏಕದಿನ ಸರಣಿ ಡಿಸೆಂಬರ್ 6ರಂದು ಅಂತ್ಯಗೊಳ್ಳಲಿದೆ. ಬಳಿಕ ಅಹ್ಮದಾಬಾದ್ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಅದರಲ್ಲಿ ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ಹೆಡ್ ಕೋಚ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: IND vs SA ODI: ರಾಂಚಿಯಲ್ಲಿ ನಾಳೆಯಿಂದ ಭಾರತ–ದಕ್ಷಿಣ ಆಫ್ರಿಕಾ ಏಕದಿನ ಸರಣಿ.!
ಗೊಂದಲಗಳಿಗೆ ಬ್ರೇಕ್ – ಭವಿಷ್ಯಕ್ಕೆ ಸ್ಪಷ್ಟತೆ?
ಸೌತ್ ಆಫ್ರಿಕಾ ಸರಣಿ ಅಂತ್ಯವಾದ ತಕ್ಷಣ ನಡೆಯುವ ಈ ಸಭೆಯಲ್ಲಿ, ಕೊಹ್ಲಿ–ರೋಹಿತ್ರ ಮುಂದಿನ ಪಂದ್ಯಗಳ ಲಭ್ಯತೆ, ಪಾತ್ರ, ತಂಡದಲ್ಲಿ ಅವರ ದೀರ್ಘಕಾಲೀನ ಯೋಜನೆಗಳಿಗೆ ಸಂಬಂಧಿಸಿದ ಸ್ಪಷ್ಟನೆ ನೀಡಲಾಗುವ ಸಾಧ್ಯತೆ ಇದೆ.
ಸೌತ್ ಆಫ್ರಿಕಾ ಸರಣಿ ಬಳಿಕ ಕೊಹ್ಲಿ–ರೋಹಿತ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಬಳಿಕ ಭಾರತದ ಮುಂದಿನ ಏಕದಿನ ಸರಣಿ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ.
ಕೌಂಟಿ ಕ್ರಿಕೆಟ್ ಮತ್ತು ವಿಜಯ್ ಹಜಾರೆ ಕಪ್ನಲ್ಲಿ ಆಡಲು ಸೂಚನೆ?
ಕ್ರಿಕೆಟ್ ಟಚ್ ಕಳೆದುಕೊಳ್ಳಬಾರದೆಂಬ ಕಾರಣದಿಂದ ಬಿಸಿಸಿಐ ವಲಯದಲ್ಲಿ ವಿಜಯ್ ಹಜಾರೆ ಟ್ರೋಫಿ ಮತ್ತು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಆಡಲು ಕೊಹ್ಲಿ, ರೋಹಿತ್ಗೆ ಸೂಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
MUST WATCH: IPL CRICKET | 14ನೇ ವರ್ಷಕ್ಕೆ ಐಪಿಎಲ್ ಗೆ ಪಾದಾರ್ಪಣೆ-ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿದ ಪೋರ




