BBK : ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಲು ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದೆ.

ಬಿಗ್ ಬಾಸ್ (Bigg Boss) ಮನೆಗೆ ಅತಿಥಿಗಳ ಆಗಮನ ಹಿನ್ನೆಲೆಯಲ್ಲಿ ಸಖತ್ Entertainment ಸಿಗ್ತಿದೆ. ಈ ಮಧ್ಯೆ ಮುಂದಿನ ವಾರ ಮನೆಯಿಂದ ಹೊರ ಕಳುಹಿಸಲು ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ.
ಇದನ್ನು ನೋಡಿ : IAS ಅಧಿಕಾರಿ Mahantesh Bilagi ನಿಧನ ಕಂಬನಿ ಮಿಡಿದ ಸಹೃದಯಿ J. C. Madhu Swamy

ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ..?
ಅಶ್ವಿನಿ ಗೌಡ, ಜಾನ್ವಿ, ಧ್ರುವಂತ್, ಗಿಲ್ಲಿ ನಟ, ಕಾವ್ಯ, ಮ್ಯುಟಂಟ್ ರಘು ಹಾಗೂ ಮಾಳು ಅವರು ನಾಮಿನೇಟ್ ಆಗಿದ್ದಾರೆ. ಒಟ್ಟು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, 6 ಮಂದಿ ಸೇವ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ, ಅಭಿಷೇಕ್, ಸ್ಪಂದನಾ, ಧನುಷ್, ರಾಶಿಕಾ, ಸೂರಜ್ ಸೇವ್ ಆಗಿದ್ದಾರೆ. ಇವರಲ್ಲಿ ಯಾರನ್ನು ಮನೆಯಿಂದ ಹೊರ ಕಳುಹಿಸಿಕೊಳ್ಳಲಾಗುತ್ತದೆಯೋ ಎಂಬುದು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

ಮಾಜಿ ಸ್ಪರ್ಧಿಗಳ ವಿಶೇಷ ಆಗಮನ
ಈ ನಡುವೆ, ಮನೆಗೆ ಹಳೆಯ ಸ್ಪರ್ಧಿಗಳು ಆಗಮಿಸಿದ್ದು ಮನೆಯನ್ನು ಪ್ಯಾಲೆಸ್ ರೀತಿಯಲ್ಲಿ ರೂಪಾಂತರಿಸಿ ಅತಿಥಿಗಳ ಸೇವೆಗೆ ಸ್ಪರ್ಧಿಗಳಿದ್ಧಾರೆ. BBK ಸೀಸನ್ 11 ರ ಸ್ಪರ್ಧಿಗಳಾದ ಮಂಜು, ತ್ರಿವಿಕ್ರಂ, ಚೈತ್ರಾ ಕುಂದಾಪುರ, ರಜತ್ ಕಿಶನ್ ಆಗಮಿಸಿದ್ದಾರೆ.

ಇದನ್ನು ಓದಿ : Mysuru|ಟೀ ಕುಡಿಯಲು ಹೋದ ಯುವಕ ಸ್ನೇಹಿತರಿಂದಲೇ ಕೊಲೆ




