Namrata Gowda : ಟ್ರಾವೆಲ್ ಮಾಡೋದು..ಹೊಸ ಜಾಗಗಳನ್ನ ಎಕ್ಸ್ಪ್ಲೋರ್ ಮಾಡೋದ್ರಲ್ಲಿ ನಟಿ ನಮ್ರತಾ ಎಕ್ಸಫರ್ಟ್. ಶೂಟಿಂಗ್ನಿಂದ ಬ್ರೇಕ್ ತಗೊಂಡು ಫಾರೀನ್ಗೆ ಹಾರಿದ್ದಾರೆ

‘ಕರ್ಣ’ ಧಾರಾವಾಹಿಯ ನಿತ್ಯಾ ಪಾತ್ರದಿಂದ ಜನಮನ ಗೆದ್ದ ನಟಿ ನಮ್ರತಾ, ಶೂಟಿಂಗ್ನಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ವಿದೇಶ ಪ್ರವಾಸಕ್ಕೆ ಹಾರಿದ್ದಾರೆ. ಹೊಸ ಜಾಗಗಳನ್ನ Explore ಮಾಡುವುದರಲ್ಲಿ Expert ಆಗಿರುವ ನಮ್ರತಾ, ಈ ಬಾರಿ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ವಿಯಟ್ನಾಂ (Vietnam) ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ನಮ್ರತಾ ಗೌಡ ಸೋಲೋ ಟ್ರಿಪ್
ಧಾರಾವಾಹಿಯಲ್ಲಿ ಬೋಲ್ಡ್ ಹಾಗೂ ಇಂಡಿಪೆಂಡೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಮ್ರತಾ, ರಿಯಲ್ ಲೈಫ್ನಲ್ಲಿಯೂ ಟ್ರೆಂಡ್ ಸೆಟ್ಟರ್. ಡ್ರೆಸ್ಸಿಂಗ್ ಸ್ಟೈಲ್, ಮೇಕಪ್, ಫುಡ್ ಮತ್ತು ಟ್ರಾವೆಲ್—ಎಲ್ಲದರಲ್ಲೂ ತಮ್ಮದೇ ಸ್ಟೈಲ್ ಇಟ್ಟುಕೊಂಡಿರುವ ಅವರು, ಇತ್ತೀಚೆಗೆ ಟ್ರೆಂಡ್ ಆಗಿರುವ Solo Trip ಅನ್ನು ಅನುಭವಿಸಲು ಮುಂದಾದರು.
ಇದನ್ನು ಓದಿ : Road Accident|ಅಪಘಾತದಲ್ಲಿ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು

ಗೈಡ್ ಹಯರ್ ಮಾಡಿದ್ದ ನಟಿ, ಅವ್ರ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಬ್ಯೂಟಿಫುಲ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡ್ಕೊಂಡಿದ್ದಾರೆ.
“ಈ ಫೋಟೋ ನನ್ನ ಫೇವರಿಟ್”
ಇದರ ಜೊತೆಗೆ, ಸಖತ್ ಚಬ್ಬಿ-ಚಬ್ಬಿಯಾಗಿ ಮುದ್ದಾಗಿದ್ದ ತಮ್ಮ ಬಾಲ್ಯದ ಕ್ಯೂಟ್ ಫೋಟೋವನ್ನೂ ಪೋಸ್ಟ್ ಮಾಡಿರುವ ನಮ್ರತಾ, ಅಭಿಮಾನಿಗಳ ಮನ ಗೆದ್ದಿದ್ದಾರೆ. “ಈ ಫೋಟೋ ನನ್ನ ಫೇವರಿಟ್!” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಇದನ್ನು ನೋಡಿ : ಕಚೇರಿಯನ್ನ ಅತ್ತೆ ಮನೆ ಮಾಡಿಕೊಂಡ್ರಾ ಕ್ರೀಡಾ ಇಲಾಖೆಯ ಅಧಿಕಾರಿಗಳು..!?




