Smriti Mandhana Wedding Postponed : ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾದ ಕಾರಣ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

Smriti Mandhana Wedding Postponed –ತಂದೆಗೆ ಹೃದಯಾಘಾತ
ಭಾರತದ ಕ್ರಿಕೆಟ್ ತಾರೆ ಮತ್ತು ಆರ್ಸಿಬಿ ವುಮೆನ್ಸ್ ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಮದುವೆ ತುರ್ತು ಪರಿಸ್ಥಿತಿಯಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ನವೆಂಬರ್ 23 (ಭಾನುವಾರ) ನಡೆಯಬೇಕಿದ್ದ ಮದುವೆ, ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಆಗಿರುವ ಹೃದಯಾಘಾತ ಕಾರಣದಿಂದ ತಾತ್ಕಾಲಿಕವಾಗಿ ರದ್ದುಗೊಂಡಿದೆ.
ಸಾಂಗ್ಲಿಯ ಸ್ಯಾಮ್ಡೋಲ್ನಲ್ಲಿ ಮಂಧಾನ ಫಾರ್ಮ್ಹೌಸ್ನಲ್ಲಿ ಮದುವೆ ಸಿದ್ದತೆಗಳು ಜೋರಾಗಿ ನಡೆಯುತ್ತಿರುವಾಗಲೇ,ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಭಾನುವಾರದ ಬೆಳಗ್ಗೆ ಹೃದಯಾಘಾತವಾಗಿದೆ.
ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ವೀಕ್ಷಣೆಯಲ್ಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮದುವೆ ಮುಂದೂಡಿಕೆಯ ಬಗ್ಗೆ ಅಧಿಕೃತ ದೃಢೀಕರಣ
ಸ್ಮೃತಿಯ ವ್ಯವಹಾರ ವ್ಯವಸ್ಥಾಪಕ ತುಹಿನ್ ಮಿಶ್ರಾ ಹೇಳುವಂತೆ—“ಸ್ಮೃತಿ ತನ್ನ ತಂದೆ ಸಂಪೂರ್ಣ ಗುಣಮುಖರಾಗುವವರೆಗೆ ಮದುವೆ ಮುಂದೂಡಲು ನಿರ್ಧರಿಸಿದ್ದಾರೆ. ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದು, ಕುಟುಂಬವೇ ಆಘಾತದಲ್ಲಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ.”
ಇದನ್ನೂ ಓದಿ :ಕುರ್ಚಿ ಕದನ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್
ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್,6 ವರ್ಷಗಳ ಪ್ರೀತಿಯ ನಂತರ ನವೆಂಬರ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು.ಮದುವೆ ಪೂರ್ವ ಕಾರ್ಯಕ್ರಮಗಳು ಕಳೆದ ಮೂರು ದಿನಗಳಿಂದ ಜೋರಾಗಿ ನಡೆಯುತ್ತಿದ್ದು,ಶನಿವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿಸ್ಮೃತಿ–ಪಲಾಶ್ ಜೋಡಿ ಡ್ಯಾನ್ಸ್ ಮಾಡಿದ ವಿಡಿಯೋಗಳು ವೈರಲ್ ಆಗಿದ್ದವು.
ಆದರೆ ಕೊನೆಯ ಕ್ಷಣದಲ್ಲಿ ತಂದೆಯ ಆರೋಗ್ಯ ಸಮಸ್ಯೆ ಎಲ್ಲವನ್ನು ಬದಲಿಸಿತು.
ತಂದೆಯ ಆರೋಗ್ಯ ಏನೆಲ್ಲ ಸಂಭವಿಸಿತು?
ಕುಟುಂಬದ ಹೇಳಿಕೆಯ ಪ್ರಕಾರ—ಬೆಳಗಿನ ಉಪಾಹಾರ ಸಮಯದಲ್ಲೇ ಶ್ರೀನಿವಾಸ್ ಮಂಧಾನ ಅಸ್ವಸ್ಥರಾದರು , ಆರಂಭದಲ್ಲಿ ಸಾಮಾನ್ಯ ಸಮಸ್ಯೆ ಎಂದು ಭಾವಿಸಿದ ಕುಟುಂಬ , ಆದರೆ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿತು , ಈಗ ಅವರು ತುರ್ತು ಚಿಕಿತ್ಸೆಯಲ್ಲಿದ್ದಾರೆ
ಮದುವೆ ಹೊಸ ದಿನಾಂಕ ಯಾವಾಗ?
ಪ್ರಸ್ತುತ ಮದುವೆ ಯಾವಾಗ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ.ಕುಟುಂಬವು ತಂದೆಯ ಆರೋಗ್ಯ ಸ್ಥಿತಿ ಸುಧಾರಿಸುವವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ.
MUST WATCH : TB JAYACHANDRA ಸಿಎಂ ಬದಲಾವಣೆ ವಿಚಾರ -ಶಾಕಿಂಗ್ ಹೇಳಿಕೆ ಕೊಟ್ಟ ಟಿ.ಬಿ.ಜಯಚಂದ್ರ




