BBK : ಬಿಗ್ ಬಾಸ್ ಮನೆಯಲ್ಲಿ ಸದಾ ಹೈಲೈಟ್ ಆಗುವ ಜೋಡಿ ಅಂದರೆ ಅದುವೇ ಗಿಲ್ಲಿ ಹಾಗೂ ಕಾವ್ಯ. ಇವರಿಬ್ಬರ ಜೋಡಿಗೆ ವೀಕ್ಷಕರ ಮೆಚ್ಚುಗೆ ಇದೆ.

BBK : ಬಿಗ್ ಬಾಸ್ ಮನೆಯಲ್ಲಿ ಸದಾ ಹೈಲೈಟ್ ಆಗುತ್ತಿರುವ ಜೋಡಿ ಎಂದರೆ ಗಿಲ್ಲಿ (Gilli Nata) ಮತ್ತು ಕಾವ್ಯ (Kavya Shaiva). ವೀಕ್ಷಕರ ಮೆಚ್ಚುಗೆ ಹೊಂದಿರುವ ಈ ಜೋಡಿಯಲ್ಲಿ ಇತ್ತೀಚೆಗೆ ತೀವ್ರ ಕಲಹಗಳು ಗಮನಸೆಳೆದಿವೆ.
ಗಿಲ್ಲಿ ವಿರುದ್ಧ ತಿರುಗಿಬಿದ್ದ ಕಾವ್ಯ
ಇತ್ತೀಚಿನ ಪ್ರೋಮೋದಲ್ಲಿ, ಕಾವ್ಯ ಗಿಲ್ಲಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಸುದೀಪ್ ಅವರ ಮುಂದೆ ಕಾವ್ಯ ಗಿಲ್ಲಿ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ನನಗೆ ವೈಯಕ್ತಿಕ ನೋವು ತರುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಡಿಕೆಶಿ ಸಿಎಂ ಆಗುವ ಬಗ್ಗೆ ಗಿಣಿಶಾಸ್ತ್ರ ಕೇಳಿದ ಬಿಜೆಪಿಗರು!
ಒಬ್ಬರನ್ನ ಕೆಳಗೆ ಹಾಕಿ ಮಾತನಾಡುತ್ತಾರೆ
ಸುದೀಪ್ “ಒಬ್ಬರ ಮನಸ್ಸನ್ನು ನೋಯಿಸುವ ಅಪರಾಧ ಯಾರು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದಾಗ, ಧನುಷ್ “ಗಿಲ್ಲಿ ಅವರು ಒಬ್ಬರನ್ನ ಕೆಳಗೆ ಹಾಕಿ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ. ಅಶ್ವಿನಿ ಕೂಡ “ಗಿಲ್ಲಿ ತಮ್ಮ ಸ್ಟ್ರಾಟಜಿಯ ಮೂಲಕ ಅವರನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.
ನಿಮ್ಮ ಬಗ್ಗೆ ಇರೋ ಸತ್ಯವನ್ನು ಕಾಮಿಡಿ ಮೂಲಕ ಹೇಳುತ್ತಿರುತ್ತೇನೆ
ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, ʻನಿಮ್ಮ ಬಗ್ಗೆ ಇರೋ ಸತ್ಯವನ್ನು ಕಾಮಿಡಿ ಮೂಲಕ ಹೇಳುತ್ತಿರುತ್ತೇನೆ. ಅದು ಯಾರನ್ನು ಕೆಳಗಿಟ್ಟು ಮಾತನಾಡೋದು ಆಗಲ್ಲ. ಯಾರೋ ಯಾವುದೋ ಮೂಲೆಯಲ್ಲಿ ಕುಳಿತು ಮಾತಾಡರ್ತೀರಾ? ಹೊರಗೆ ಹೋಗಿ ನೋಡಿದ್ಮೇಲೆ ಸತ್ಯ ಗೊತ್ತಾಗುತ್ತದೆ. ಇದ್ದಿದ್ದನ್ನು ಇದ್ದಂತೆ ಹೇಳಿದಾಗ ಅದಕ್ಕೆ ನಿಮಗೆ ಹಾಗೆ ಅನ್ನಿಸಿರಬಹುದುʼ ಎಂದು ಗಿಲ್ಲಿ ನಟ ಹೇಳಿದ್ದಾರೆ.
ಇದನ್ನು ನೋಡಿ : PRAJASHAKTHI TV ವರದಿಗೆ ಪಾಲಿಕೆ ಅಲರ್ಟ್ – ಗುಂಡಿ ಬಿದ್ದ ರಸ್ತೆ ಮುಚ್ಚಿದ ಅಧಿಕಾರಿಗಳು




