Pavagada: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗಲೆಂದು ಹಾರೈಸಿ ಅವರ ಅಭಿಮಾನಿಗಳು ಶನಿದೇವರಿಗೆ ತುಲಾಭಾರ ಸೇವೆ ಮಾಡಿದ್ದಾರೆ.

Pavagada: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿ ಎಂಬ ಹಾರೈಕೆಯಿಂದ ಅಭಿಮಾನಿಗಳು ವಿಶಿಷ್ಟ ಧಾರ್ಮಿಕ ಸೇವೆ ನೆರವೇರಿಸಿದ್ದಾರೆ.
ಸಿಎಂ ಆಗಲಿ ಡಿಕೆ ಶಿವಕುಮಾರ್-ಅಭಿಮಾನಿಗಳಿಂದ 91 ಕೆ.ಜಿ ತುಲಾಭಾರ ಸೇವೆ
ಪಾವಗಡ ಪಟ್ಟಣದ ಶನಿದೇವರಿಗೆ 91 ಕೆ.ಜಿ ಎಳ್ಳಿನ ತುಲಾಭಾರ ಸಲ್ಲಿಸುವ ಮೂಲಕ, ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕುರ್ಚಿ ಕದನದ ನಡುವೆ ಡಿಕೆ ಶಿವಕುಮಾರ್ ಅವರಿಗೆ ಶುಭವಾಗಲೆಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ :ಕುರ್ಚಿ ಕದನ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್
ಡಿಕೆಶಿಗೆ ಸಿಎಂ ಹಾದಿ ಸುಗಮವಾಗಲೆಂದು ಪ್ರಾರ್ಥನೆ
ಇನ್ನ ಡಿಕೆ ಶಿವಕುಮಾರ್ ಅವರ ಕುಜ ಮತ್ತು ಶನಿ ದೋಷಗಳು ನಿವಾರಣೆಗೊಂಡು, ಅವರ ರಾಜಕೀಯ ಹಾದಿ ಸುಗಮವಾಗಲಿ ಎಂಬ ಉದ್ದೇಶದಿಂದ ದೇವಾಲಯದಲ್ಲಿ ನವಗ್ರಹಗಳಿಗೆ ವಿಶೇಷ ತೈಲಾಭಿಷೇಕ ಕೂಡ ನೆರವೇರಿಸಿದ್ದಾರೆ.
ಪಾವಗಡದಲ್ಲಿ ಡಿಕೆಶಿ ಅಭಿಮಾನಿಗಳ ಭಕ್ತಿಪರ್ವ
ಈ ಕಾರ್ಯಕ್ರಮ ಸ್ಥಳೀಯರ ಗಮನ ಸೆಳೆದಿದ್ದು, ದೇವಾಲಯದ ಆವರಣದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಯಿತು.
ನವಗ್ರಹಗಳಿಗೆ ವಿಶೇಷ ತೈಲಾಭಿಷೇಕ
ಈ ವೇಳೆ ಮಾಜಿ ತಾಲೂಕು ಪಂಚಾಯತ್ ಸದಸ್ಯ ಹನುಮಂತರಾಯಪ್ಪ, ಡಿಕೆಶಿ ಅಭಿಮಾನಿ ಬಳಗ ಅಧ್ಯಕ್ಷ ಕಳರಾಜನಹಳ್ಳಿ ಗೋವಿಂದರಾಜು, ನಿವೃತ್ತ ಶಿಕ್ಷಕ ಚಿಕ್ಕಣ್ಣ, ಉಮಾಪತಿ, ಹರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಡಿಕೆ ಶಿವಕುಮಾರ್ ಅವರಿಗೆ ಭವಿಷ್ಯದಲ್ಲಿ ಹೆಚ್ಚಿನ ರಾಜಕೀಯ ಯಶಸ್ಸು ದೊರಕಲೆಂದು ಹಾರೈಸಿದರು.
MUST WATCH : TB JAYACHANDRA ಸಿಎಂ ಬದಲಾವಣೆ ವಿಚಾರ -ಶಾಕಿಂಗ್ ಹೇಳಿಕೆ ಕೊಟ್ಟ ಟಿ.ಬಿ.ಜಯಚಂದ್ರ




