Actress Disha Patani : ಬಾಲಿವುಡ್ನ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ, ಮತ್ತೊಮ್ಮೆ ತಮ್ಮ ಗ್ಲಾಮರ್ ಲುಕ್ನಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಬಾಲಿವುಡ್ನ ಹಾಟ್ & ಸ್ಟೈಲಿಷ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ, ಮತ್ತೊಮ್ಮೆ ತಮ್ಮ ಗ್ಲಾಮರ್ ಲುಕ್ನಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿರುವ ವಿಶೇಷ ಗೋಲ್ಡ್ ಟಿಷ್ಯೂ ಸೀರೆಯಲ್ಲಿ (Gold Tissue Sare) ದಿಶಾ ಮಿಂಚಿದ್ದು, ಫ್ಯಾಷನ್ ಪ್ರಿಯರನ್ನು ತೀವ್ರವಾಗಿ ಸೆಳೆದಿದ್ದಾರೆ.
ಗೋಲ್ಡನ್ ಟಿಷ್ಯೂ ಸೀರೆಯಲ್ಲಿ ದಿಶಾ ಮೆರಗು
ಮನೀಶ್ ಮಲ್ಹೋತ್ರಾ ಅವರ ಸಂಗ್ರಹದ ಈ ಸೀರೆಯ ವಿಶೇಷತೆ ಎಂದರೆ ಅದರಲ್ಲಿ ನೀಡಲಾದ ನವಿರಾದ ಪರ್ಲ್ ಹಾಗೂ ಗೋಲ್ಡನ್ ಬೀಡ್ಸ್ ವಿನ್ಯಾಸ. ಇದಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಎಂಬ್ರಾಯ್ಡ್ ಮಾಡಿದ ಗೋಲ್ಡ್ ಬ್ಲೌಸ್ ದಿಶಾ ಅವರ ಲುಕ್ಗೆ ಮತ್ತಷ್ಟು ಮೆರಗು ನೀಡಿದೆ.
ಇದನ್ನು ಓದಿ : ಕುರ್ಚಿ ಕದನ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್

ಹಾಟ್ ಲುಕ್ನಲ್ಲಿ ಮತ್ತೊಮ್ಮೆ ಗಮನ ಸೆಳೆದ ದಿಶಾ
ಅಂದಮಯ ಶೈಲಿ, ಸ್ಟೈಲಿಷ್ ಫೋಟೋಶೂಟ್ಗಳು ಮತ್ತು ಗ್ಲಾಮರ್ ಲುಕ್ಗಳ ಮೂಲಕ ಸದಾ ಸುದ್ದಿಗಳಲ್ಲೇ ಇರುವ ದಿಶಾ, ಈ ಬಾರಿ ಸಂಪ್ರದಾಯಿಕ ಸೀರೆಯಲ್ಲೂ ತಮ್ಮದೇ ಆದ Hot & Cofident Look ಪ್ರದರ್ಶಿಸಿದ್ದಾರೆ. ಸೀರೆಯ ಡ್ರೇಪ್ ಹಾಗೂ ಮ್ಯಾಚಿಂಗ್ ಜ್ಯುವೆಲರಿ ಅವರ ಲುಕ್ ಅನ್ನು ಇನ್ನೂ ಅಂದವಾಗಿ ತೋರಿಸಿದೆ.
ಫ್ಯಾಷನ್ ಪರಿಣಿತರ ಪ್ರಕಾರ, ದಿಶಾ ಪಟಾನಿ ಈ ಗೋಲ್ಡನ್ ಸೀರೆಯೊಂದಿಗೆ ಸಾಂಪ್ರದಾಯಿಕ ಹಾಗೂ ಆಧುನಿಕ ಲುಕಿನ ಸುಂದರ ಮಿಶ್ರಣ ನೀಡಿದ್ದು, ಈ ಲುಕ್ ಈಗಾಗಲೇ ಫ್ಯಾಷನ್ ವಲಯದಲ್ಲಿ Trend ಆಗುತ್ತಿದೆ.

ಇದನ್ನು ನೋಡಿ : ರಾಹುಲ್ ಗಾಂಧಿ ಫೇಲ್ಯೂರ್ ನಾಯಕ ಮಾಜಿ ಸಂಸದ ಮುನಿಸ್ವಾಮಿ ಹೇಳಿಕೆ




