Tumakuru Protest : ‘ಎಲ್ಲ ದಾಖಲೆ ಸರಿ ಇದ್ದರೂ ಕಡತ ವಾಪಸ್ ಕಳುಹಿಸಿದ್ದಾರೆ. ಹಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ.

‘ಎಲ್ಲ ದಾಖಲೆ ಸರಿ ಇದ್ದರೂ ಕಡತ ವಾಪಸ್ ಕಳುಹಿಸಿದ್ದಾರೆ. ಹಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಹಣ ಕೊಡುತ್ತೇವೆ, ಕೆಲಸ ಮಾಡಿಕೊಡಿ’ ಎಂದು ಒತ್ತಾಯಿಸಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ನೆಲದ ಮೇಲೆ ಹಣ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಇದನ್ನು ಓದಿ : Bhatkal |ಹೋಮ್ಸ್ಟೇ ಈಜು ಕೊಳದಲ್ಲಿ ಬಿದ್ದು 5 ವರ್ಷದ ಬಾಲಕ ಸಾವು..!
ಹಣಕ್ಕಾಗಿ ನೆಪ ಹೇಳುತ್ತಿದ್ದಾರೆ
ಹಣ ‘ಬರ ಪರಿಹಾರ, ರಾಗಿ ಮಾರಾಟದ ಪಡೆಯಲು ಎಫ್ಐಡಿ ಮಾಡಿಸಬೇಕು. ಇದಕ್ಕಾಗಿ ಅರ್ಜಿ ಸಲ್ಲಿ ಸಲಾಗಿತ್ತು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕುಣಿಗಲ್ನಲ್ಲಿ ಅರ್ಜಿ ಹಾಕಲಾಗಿತ್ತು. ಅರ್ಜಿ 7 ತಿಂಗಳ ನಂತರ ಎ.ಸಿ ಕಚೇರಿಗೆ ಬಂದಿದೆ. ಈಗ ಇಡೀ ಕಡತ ವಾಪಸ್ ಕಳುಹಿಸಿದ್ದಾರೆ. ಪಹಣಿಯಲ್ಲಿ 3 ಮತ್ತು 7 ತಾಳೆ ಆಗುತ್ತಿಲ್ಲ ಕಾರಣ ಹೇಳುತ್ತಿದ್ದಾರೆ. ಹಣಕ್ಕಾಗಿ ನೆಪ ಹೇಳುತ್ತಿದ್ದಾರೆ’ ಎಂದು ವೇದಿಕೆ ಮುಖಂಡ ಎಚ್.ಜಿ.ರಮೇಶ್ ಆರೋಪಿಸಿದರು.
ಸಕಾಲಕ್ಕೆ ಕೆಲಸ ಮಾಡಿಕೊಡಿ
‘ರೈತರನ್ನು ಅಲೆಸುವುದು ಬೇಡ, ಹಣ ಕೇಳಿ ಕೊಡುತ್ತೇವೆ. ಸಕಾಲಕ್ಕೆ ಕೆಲಸ ಮಾಡಿಕೊಡಿ’ ಎಂದು ಹಣವನ್ನು ಪ್ರದರ್ಶಿಸಿದರು.
ಇದನ್ನು ನೋಡಿ : ರಾಜಣ್ಣಗೆ ಮತ್ತೆ ಸಚಿವ ಸ್ಥಾನ ಕೊಡಿ – ತಂದೆಗಾಗಿ ಡೆಲ್ಲಿಗೆ ಹಾರಿದ ರಾಜೇಂದ್ರ




