Belagavi News : ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂಭವಿಸಿದ 31 ಕೃಷ್ಣಮೃಗಗಳ ಸಾವಿಗೆ ‘ಇಂಡೀಡ್ ಹೆಮರೈಜಿಕ್ ಸೆಪ್ಪಿಸಿಮಿಯಾ’ ರೋಗವೇ ಕಾರಣ ಎಂದು ಡಿಸಿಎಫ್ ಸ್ಪಷ್ಟಪಡಿಸಿದೆ.

ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂಭವಿಸಿದ 31 ಕೃಷ್ಣಮೃಗಗಳ ಸಾವಿಗೆ ‘ಇಂಡೀಡ್ ಹೆಮರೈಜಿಕ್ ಸೆಪ್ಪಿಸಿಮಿಯಾ’ ರೋಗವೇ ಪ್ರಮುಖ ಕಾರಣ ಎಂದು ಡಿಸಿಎಫ್ ಎನ್.ಇ. ಕ್ರಾಂತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ : Gold Price Today : ಚಿನ್ನದ ದರದಲ್ಲಿ ಮತ್ತೆ ಏರಿಕೆ
ಕ್ರಾಂತಿ ಅವರ ಮಾಹಿತಿಯಂತೆ, ಈ ಸೋಂಕು ಗಾಳಿಯ ಮೂಲಕ ಮತ್ತು ಪ್ರಾಣಿಯಿಂದ ಪ್ರಾಣಿಗೆ ಹರಡುವ ಸಾಧ್ಯತೆ ಇದ್ದುದರಿಂದ, ಮೃಗಾಲಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಹೆಚ್ಚಿನ ಗಮನ ನೀಡುವಂತೆ ಮುನ್ಸೂಚನೆ ನೀಡಲಾಗಿದೆ.
ಆದರೆ ಮೃಗಾಲಯದ ಪರಿಸ್ಥಿತಿ ಈಗ ಹತೋಟಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಉಳಿದ ಏಳು ಕೃಷ್ಣಮೃಗಗಳು ಲವಲವಿಕೆಯಿಂದ ಇರುತ್ತಿದ್ದು, ಸೋಂಕು ಇತರ ಪ್ರಾಣಿಗಳಿಗೆ ತಲೆಯಿಡದಂತೆ ಕಟ್ಟೆಚ್ಚರ ವಹಿಸಿದ್ದೇವೆ ಎಂದು ಕ್ರಾಂತಿ ಹೇಳಿದರು.
ಇದನ್ನು ನೋಡಿ : ನಾನು ಎನ್ನುವ ಸ್ವಾರ್ಥ ಬಿಟ್ಟು ಬಿಡಿ – ವಿದ್ಯಾರ್ಥಿಗಳಿ ಗೆಶಿಕ್ಷಕಿ ಲಕ್ಷ್ಮೀ ಕರೆ




