Bengaluru : ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಐದು ಸಾವಿರ ರೂ. ಹಾಗೂ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ.

Bengaluru : ರಾಜ್ಯ ಸರ್ಕಾರವು ಬೀದಿ ನಾಯಿಗಳ ದಾಳಿಯಿಂದ ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ನಾಗರಿಕರಿಗೆ ಪರಿಹಾರ ನೀಡುವ ಕುರಿತು ಹೊಸ ಆದೇಶವನ್ನು ಹೊರಡಿಸಿದೆ. ಇದರಂತೆ, ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಒಟ್ಟು ₹5,000 ಪರಿಹಾರ ದೊರಕಲಿದೆ. ಇದರಲ್ಲಿ ಚಿಕಿತ್ಸೆಗೆ ₹1,500 ಹಾಗೂ ಗಾಯದ ಪರಿಹಾರವಾಗಿ ₹3,500 ನೀಡಲಾಗುತ್ತದೆ.
₹5 ಲಕ್ಷ ರೂ. ಪರಿಹಾರ
ಬೀದಿ ನಾಯಿಗಳ ದಾಳಿಯಿಂದ ಅಥವಾ ರೇಬೀಸ್ ಸೋಂಕಿನಿಂದ (Rabies Infection) ಸಾವನ್ನಪ್ಪುವವರಿಗೆ ₹5 ಲಕ್ಷ ಪರಿಹಾರ ನೀಡಲಾಗುವುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿ : ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ವಿಶೇಷ ಸಮಿತಿಯನ್ನು ರಚಿಸಲು ಸೂಚನೆ
ಅದೇ ರೀತಿ, ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಬೀದಿ ನಾಯಿಗಳ ಕಡಿತ ಪ್ರಕರಣಗಳನ್ನು ಪರಿಶೀಲಿಸಿ, ಸೂಕ್ತ ಪರಿಹಾರ ಧನ ವಿತರಿಸಲಿರುವ ವಿಶೇಷ ಸಮಿತಿಯನ್ನು ರಚಿಸಲು ಸರ್ಕಾರ ಸೂಚಿಸಿದೆ. ಈ ಸಮಿತಿ ನಾಗರಿಕರಿಂದ ಬರುವ ದೂರಿನ ಪರಿಶೀಲನೆ, ದಾಖಲೆಗಳ ಪರಿಶೋಧನೆ ಹಾಗೂ ಪರಿಹಾರದ ಅನುಮೋದನೆ ಕಾರ್ಯಗಳನ್ನು ನೋಡಿಕೊಳ್ಳಲಿದೆ.
ಇನ್ನು ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿ ಪ್ರಕರಣಗಳ ಹಿನ್ನೆಲೆ ಸರ್ಕಾರದ ಈ ಕ್ರಮ ಮಹತ್ವದ್ದಾಗಿ ಪರಿಗಣಿಸಲಾಗಿದೆ.
ಇದನ್ನು ನೋಡಿ : ರಾಜ್ಯದಲ್ಲಿ ಹೆಚ್ಚಾಯ್ತು ಸಿಎಂ ಗದ್ದುಗೆ ಗುದ್ದಾಟ – ಮಾಜಿ ಶಾಸಕ ಸಾ.ಲಿಂಗಯ್ಯ ಹಿಂಗ್ಯಾಕಂದ್ರು




