Kannada Actress Nayana : ಕಿರುತೆರೆ ನಟಿ ಹಾಗೂ ‘ಕಾಮಿಡಿ ಕಿಲಾಡಿ’ ಖ್ಯಾತಿಯ ನಯನಾ (Nayana) ವಿರುದ್ಧ ಜಾತಿ ನಿಂದನೆ ಪ್ರಕರಣದಲ್ಲಿ FIR ದಾಖಲಾಗಿದೆ.

ಕಿರುತೆರೆ ನಟಿ ಹಾಗೂ ‘ಕಾಮಿಡಿ ಕಿಲಾಡಿ’ ಖ್ಯಾತಿಯ ನಯನಾ (Nayana) ವಿರುದ್ಧ ಜಾತಿ ನಿಂದನೆ ಪ್ರಕರಣದಲ್ಲಿ FIR ದಾಖಲಾಗಿದೆ. ಕಲಬುರಗಿ ನಗರದ ಸಬ್–ಅರ್ಬನ್ ಪೊಲೀಸ್ ಠಾಣೆಯಲ್ಲಿ ದಲಿತ ಸೇನೆ ಕಲಬುರಗಿ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರ ದೂರು ಆಧಾರವಾಗಿ ಈ ಪ್ರಕರಣ ದಾಖಲಾಗಿದೆ.
ಶೋಷಿತ ಸಮುದಾಯದ ವಿರುದ್ಧ ಆಕ್ಷೇಪಾರ್ಹ
ಮಂಜುನಾಥ ಭಂಡಾರಿ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 29 ರಂದು ಮನಿಮಿತ್ರಾ ಕಂಪನಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಯನಾ ಶೋಷಿತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಮಾನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಬಳಸಿದ ಪದಗಳು ದಲಿತ ಸಮುದಾಯದ ಮಾನಹಾನಿ ಮಾಡುವಂತಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ : BBK 12 : ಕಾವ್ಯ ಶೈವ ಮನಸ್ಸಿಗೆ ಘಾಸಿ ಮಾಡಿದ ಗಿಲ್ಲಿ
ಉದ್ದೇಶಪೂರ್ವಕವಾಗಿ ಶೋಷಿತ ಸಮುದಾಯಕ್ಕೆ ಅವಮಾನ
ದೂರಿನಲ್ಲಿ, “ನಯನಾ ಉದ್ದೇಶಪೂರ್ವಕವಾಗಿ ಶೋಷಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ.
ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ದೂರಿನಲ್ಲಿ ಉಲ್ಲೇಖ
ಇದೇ ಸಂದರ್ಭದಲ್ಲಿ, ನಯನಾ ಅವರ ಹೇಳಿಕೆಗಳು ಜಾತಿಯತೆಯನ್ನು ಉತ್ತೇಜಿಸುವಂತಿದ್ದು, ಶೋಷಿತ ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : KNIFE ATTACK AT BNG AIRPORT | ಸೈಡ್ ಪಿಕಪ್ ಚಾಲಕ ಹಾವಳಿ ಕೈಯಲ್ಲಿ ಚಾಕು ಇಡಿದು ವ್ಯಕ್ತಿಗಳ ದಾಂಧಲೆ




