BBK : ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ನಡುವೆ ಆಗಾಗ ಜಗಳ ಆಗುತ್ತಿರುತ್ತದೆ, ಇವರಿಬ್ಬರು ಸ್ನೇಹಿತರು, ಆಗಾಗ ಪರಸ್ಪರ ಕಾಲೆಳೆದುಕೊಂಡು ಮಾತನಾಡುತ್ತಿರುತಾರೆ.

BBK : ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ನಡುವೆ ಆಗಾಗ ಜಗಳ ಆಗುತ್ತಿರುತ್ತದೆ, ಇವರಿಬ್ಬರು ಸ್ನೇಹಿತರು, ಆಗಾಗ ಪರಸ್ಪರ ಕಾಲೆಳೆದುಕೊಂಡು ಮಾತನಾಡುತ್ತಿರುತಾರೆ. ಕೆಲವು ದಿನಗಳ ಹಿಂದೆ “ಕಾವ್ಯ ಶೈವ ಅವರನ್ನು ನೋಡಿದರೆ ವಾಂತಿ ಬರುತ್ತದೆ” ಎಂದು ಗಿಲ್ಲಿ ನಟ ಕಾಮಿಡಿ ರೂಪದಲ್ಲಿ ಹೇಳಿದ ಹೇಳಿಕೆ ಕಾವ್ಯಗೆ ತೀವ್ರ ಬೇಸರ ತಂದಿತ್ತು. ನಂತರ ಮಾತನಾಡಿಕೊಂಡು ವಿಷಯ ಶಾಂತವಾಗಿದ್ದರೂ, ಇದೀಗ ಮತ್ತೊಂದು ಕಾಮಿಡಿ ಕಾವ್ಯಗೆ ಸಿಟ್ಟು ತರಿಸಿದೆ.
“ನೀನು ಮಾಡಿದ್ದು ಸರಿನಾ?” – ಕಾವ್ಯನ ಪ್ರಶ್ನೆ
ಈ ಬಾರಿ ಗಿಲ್ಲಿ ನಟ ಮಾತನಾಡಿದ ಮಾತು ಕಾವ್ಯನಿಗೆ ಇಷ್ಟವಾಗದೆ, ಅವರು ನೇರವಾಗಿ ಪ್ರಶ್ನಿಸಿದ್ದಾರೆ. ==“ನಮ್ಮ ಟೀಂನಲ್ಲಿ ಯಾರನ್ನಾದರೂ ಮೊಂಡು, ತುಂಡು ಅಂತ ಹೇಳಿದ್ರೆ ಹೊರಗಿನವರು ಕೂಡ ಅದನ್ನೇ ಅಂದುಕೊಳ್ಳುತ್ತಾರೆ. ನೀನು ಮಾಡಿದ್ದು ಸರಿನಾ? ಅದಕ್ಕೆ ನಿನಗೆ ಬೇಸರ ಆಗಿಲ್ವಾ?”
ಇದನ್ನು ಓದಿ : ದೇಶದ ಜನರಿಗೆ ಸಿಹಿ ಸುದ್ದಿ ಕೊಟ್ಟ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ
ಗಿಲ್ಲಿ ಈ ಬಗ್ಗೆ ತಮ್ಮನ್ನು ತಾವು ಸಮರ್ಥಿಸಿಕೊಂಡು, “ಅಲ್ಲಿ ಮಾತನಾಡುವಾಗ ನೀನೇ ನಗುತ್ತಿದ್ದೆ, ಎಲ್ಲರೂ ನಗುತ್ತಿದ್ದರು” ಎಂದು ಹೇಳಿದರು. ಆದರೆ ಕಾವ್ಯ ಸಿಟ್ಟಿನಿಂದ ಅಲ್ಲಿಂದ ಹೊರನಡೆದಿದ್ದಾರೆ.
ಹಿಂದೆಯೂ ಗಿಲ್ಲಿ ಮಾತಿನಿಂದ ಕಾವ್ಯ ಅಸಮಾಧಾನ
ಇದು ಮೊದಲ ಬಾರಿಗೆ ನಡೆಯುತ್ತಿರುವ ಘಟನೆ ಅಲ್ಲ. ಹಲವಾರು ಬಾರಿ ಗಿಲ್ಲಿ ನಟನ ಮಾತು, ಕಾಮಿಡಿ ಶೈಲಿಯಿಂದ ಕಾವ್ಯ ಬೇಸರ ವ್ಯಕ್ತಪಡಿಸಿದ್ದರೆಂಬುದು ತಿಳಿದು ಬಂದಿದೆ. ತಪ್ಪು ಮಾಡಿದಾಗ ಅದನ್ನು ತಿದ್ದಲು ಇಬ್ಬರೂ ಪ್ರಯತ್ನಿಸಿದರೂ, ಉದ್ವಿಗ್ನತೆ ಮತ್ತೆ ಮರುಕಳಿಸಿದೆ.
ಸ್ನೇಹ ಏನಾಗಲಿದೆ?
ಈ ಘಟನೆ ಬಳಿಕ ಕಾವ್ಯ ಮತ್ತು ಗಿಲ್ಲಿ ನಟರ ಸ್ನೇಹ ಹೇಗೆ ಮುಂದುವರಿಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಮುಂದೇನು ನಡೆಯಲಿದೆ ಎಂಬುದನ್ನು ಕಾದು ನೋಡಬೇಕು.
ಇದನ್ನು ನೋಡಿ : ಸರಿಯಾಗಿ ಓಡಿಸಮ್ಮ ಎಂದಿದಕ್ಕೆ ಚಾಕು ಹಾಕಿದಳು! Highwayಲಿ ಅಡ್ಡಾದಿಡ್ಡಿ Scooty ಓಡಿಸಿದ ಮಹಿಳೆ




