Hardik Pandya : ಹಾರ್ದಿಕ್ ಪಾಂಡ್ಯ ಮಹಿಕಾ ಶರ್ಮಾ ಅವರನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಮಾಜಿ ಪತ್ನಿ ನತಾಶಾ ಜತೆ ವಿಚ್ಛೇದನ ಪಡೆದ ನಂತರ, ಮಹಿಕಾ ಶರ್ಮಾ ಅವರೊಂದಿಗೆ ತಮ್ಮ ಲವ್ ಲೈಫ್ನಲ್ಲಿ ಮುಂದುವರೆಯುತ್ತಿದ್ದಾರೆ. ಹಾರ್ದಿಕ್–ಮಹಿಕಾ ಜೋಡಿ ವಿದೇಶಿ ಪ್ರವಾಸಗಳಲ್ಲಿ, ಬೀಚ್ನಲ್ಲಿ ಸುತ್ತಾಡಿರು ಪೋಟೋಗಳಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ರೊಮ್ಯಾಂಟಿಕ್ ಕ್ಷಣಗಳ ಫೋಟೋ ಶೇರ್
ಇತ್ತೀಚೆಗೆ ಹಾರ್ದಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ(Instagram Account) ಮಹಿಕಾ ಶರ್ಮಾ ಅವರನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ತಮ್ಮ ಪುತ್ರ ಅಗಸ್ತ್ಯ, ಸಾಕು ಪ್ರಾಣಿ ಮತ್ತು ಕ್ರಿಕೆಟ್ ಅಭ್ಯಾಸದ ಫೋಟೊಗಳ ಜೊತೆಗೆ, ಮಹಿಕಾ ಜತೆ ಇರುವ ರೊಮ್ಯಾಂಟಿಕ್ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.
ಇದನ್ನು ಓದಿ : Bengaluru : ಚಳಿಯಿಂದ ರಾತ್ರಿ ವೇಳೆ ಮಲಗುತ್ತಿಲ್ಲ, ಕಂಬಳಿ ಕೊಡಿಸಿ ಪ್ಲೀಸ್ ಎಂದ ಚಾಲೆಂಜಿಂಗ್ ಸ್ಟಾರ್
ಮಹಿಕಾರನ್ನು ಎತ್ತಿಕೊಂಡಿರುವ ಪೊಟೋಗಳನ್ನು ಹಂಚಿಕೊಂಡಿದ್ದಾರೆ
ಇದರಲ್ಲೊಂದು ವಿಡಿಯೊ ಕೂಡ ಇದ್ದು ವಿಡಿಯೊದಲ್ಲಿ ಪಾಂಡ್ಯ ಮತ್ತು ಮಹಿಕಾ ಭಜನೆ ಮೂಲಕ ದೇವರನ್ನು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಜತೆಗೆ ಮಹಿಕಾ ಅವರ ಕೆನ್ನೆಗೆ ಮುತ್ತು ನೀಡುತ್ತಿರುವುದು ಕಂಡುಬಂದಿದೆ. ಮತ್ತೊಂದು ಚಿತ್ರಗಳಲ್ಲಿ, ತಮ್ಮ ವ್ಯಾಯಾಮದ ಸಮಯದಲ್ಲಿ ರೊಮ್ಯಾಂಟಿಕ್ ಆಗಿ ಹಾರ್ದಿಕ್ ಅವರು ಮಹಿಕಾರನ್ನು ಎತ್ತಿಕೊಂಡಿರುವುದ ನ್ನು ಕಾಣಬಹುದು.
ಒಟ್ಟಾರೆ, ಹಾರ್ದಿಕ್–ಮಹಿಕಾ ಜೋಡಿ ಅಧಿಕೃತವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಹಸೆಮಣೆ ಏರುವ ಸಾಧ್ಯತೆ ಇದೆ.
ಇದನ್ನು ನೋಡಿ : ಜೈಲಿನಲ್ಲಿದ್ದ ಉಗ್ರರ ನಡುವೆ ಮಾರಾಮಾರಿ; ಓರ್ವ ಭಯೋತ್ಪಾದಕನಿಗೆ ಗಂಭೀರ ಗಾಯ




