Actor Darshan : ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಳಿಯ ಸವಾಲು ಎದುರಾಗಿದೆ. ಚಳಿಯಿಂದಾಗಿ ನಾವ್ಯಾರು ರಾತ್ರಿ ವೇಳೆ ಮಲಗುತ್ತಿಲ್ಲ. ನಮಗೆ ಕಂಬಳಿ ಕೊಡಿಸಿ ಪ್ಲೀಸ್ ಎಂದು ಕೋರ್ಟ್ ಜಡ್ಜ್ ಗೆ ಮನವಿ ಮಾಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka Swamy Murder Case) ವಿಚಾರಣೆಗೆ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ನಟ ದರ್ಶನ್ ಕೋರ್ಟ್ನಲ್ಲಿ ತಮ್ಮ ಸಂಕಷ್ಟವನ್ನು ವ್ಯಕ್ತಪಡಿಸಿದ್ದಾರೆ.
ದರ್ಶನ್ಗೆ ಜೈಲಿನಲ್ಲಿ ಚಳಿಯ ಸವಾಲು
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಳಿಯ ಸವಾಲು ಎದುರಾಗಿದೆ. ಚಳಿಯಿಂದಾಗಿ ನಾವ್ಯಾರು ರಾತ್ರಿ ವೇಳೆ ಮಲಗುತ್ತಿಲ್ಲ. ನಮಗೆ ಕಂಬಳಿ ಕೊಡಿಸಿ ಪ್ಲೀಸ್ ಎಂದು ಕೋರ್ಟ್ ಜಡ್ಜ್ ಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ : Chikkamagaluru : ಮುಳ್ಳಯ್ಯನಗಿರಿ ತಪ್ಪಲು 4 ದಿನ ಬಂದ್
ಕಂಬಳಿ ಕೊಡಲು ಜಡ್ಜ್ ಸೂಚನೆ
ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ ಎಂದು ಕೋರ್ಟ್ ಜಡ್ಜ್ ಪ್ರಶ್ನಿಸಿದ್ದರು. ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ ಎಂದು ಜಡ್ಜ್ ವಕೀಲರನ್ನು ಪ್ರಶ್ನಿಸಿದ್ದರು. ಜೈಲು ಅಧಿಕಾರಿಗಳಿಗೆ ನಟ ದರ್ಶನ್ ಹಾಗೂ ಸಹಚರರಿಗೆ ಕಂಬಳಿ ಕೊಡಲು ಕೋರ್ಟ್ ಜಡ್ಜ್ ಸೂಚನೆ ನೀಡಿದ್ದಾರೆ.
ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಲಾಗಿದೆ.
ಇದನ್ನು ನೋಡಿ : ದಾರುಣ ಘಟನೆ.. ಟ್ರ್ಯಾಕ್ಟರ್ ಹರಿದು ಜೀವ ಕಳೆದುಕೊಂಡ ಬಾಲಕ




