Mullayanagiri : ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆ ಡಿ.1ರಿಂದ 4ರವರೆಗೆ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ದತ್ತಪೀಠದಲ್ಲಿ ನಡೆಯುವ ದತ್ತಜಯಂತಿ ಸಂಭ್ರಮದ ಹಿನ್ನೆಲೆಯಲ್ಲಿ, ಡಿಸೆಂಬರ್ 1 ರಿಂದ 4ರವರೆಗೆ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ–ಮಾನಿಕ್ಯಧಾರ ಭಾಗಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
ಇದನ್ನು ಓದಿ : Gold Price Today : ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಏರಿಕೆ
ಪ್ರವಾಸಿಗರಿಗೆ ನಿರ್ಬಂಧ
ಜಿಲ್ಲಾಡಳಿತ ಆದೇಶದ ಪ್ರಕಾರ, ಈ ಸಮಯದಲ್ಲಿ ಈ ಪ್ರದೇಶಗಳಿಗೆ ಪ್ರವಾಸಿಗರನ್ನು ಪ್ರವೇಶಿಸಬಾರದು. ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ದತ್ತಜಯಂತಿ ಸಂಭ್ರಮ ಕಾರ್ಯಕ್ರಮಗಳು ಡಿಸೆಂಬರ್ 2, 3 ಮತ್ತು 4 ರಂದು ನಡೆಯಲಿವೆ.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಈ ನಿರ್ಬಂಧದ ಆದೇಶ ಹೊರಡಿಸಿದ್ದು, ಡಿಸೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಮುಳ್ಳಯ್ಯನಗಿರಿ ಭಾಗವು ಪ್ರವಾಸಿಗರಿಗೆ ಪುನಃ ಮುಕ್ತಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನು ನೋಡಿ : ಕೊತ್ತಲವಾಡಿ ಸಿನಿಮಾ ಬಗ್ಗೆ ಅಪಪ್ರಚಾರ ಆರೋಪ – ಯಶ್ ತಾಯಿ ಪುಷ್ಪಾ ದೂರು




