BBK : ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ರಘು ಮತ್ತು ಅಶ್ವಿನಿ ಗೌಡ ನಡುವೆ ಮನೆ ಕೆಲಸದ ವಿಚಾರವಾಗಿ ದೊಡ್ಡ ಜಗಳ ನಡೆದಿದೆ.

ಬಿಗ್ ಬಾಸ್ ಮನೆಯಲ್ಲಿ ಉದ್ವಿಗ್ನ ಕ್ಷಣಗಳು ಮತ್ತೊಮ್ಮೆ ದಾಖಲಾಗಿವೆ. ಕೆಲ ವಾರಗಳ ಹಿಂದೆ ಸ್ಪರ್ಧಿ ಚಂದ್ರಪ್ರಭ ಅವರು ಎಲಿಮಿನೇಷನ್ಗೆ ಮುನ್ನವೇ ಮೆನೆಯ ಡೋರ್ ಬಡಿದು, “ನನ್ನನ್ನ ಹೊರಗೆ ಕಳಿಸಿಬಿಡಿ” ಎಂದು ಬೇಡಿಕೊಂಡಿದ್ದರೆ, ಇದೀಗ ಅದೇ ಪರಿಸ್ಥಿತಿ ಅಶ್ವಿನಿ ಗೌಡ ಮೇಲೂ ಮರುಕಳಿಸಿದೆ.
ಇಂದಿನ ಪ್ರೋಮೋ ಬಿಡುಗಡೆ
ಇಂದಿನ ಸಂಚಿಕೆಯ ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಅದರಲ್ಲಿ ಅಶ್ವಿನಿ ಗೌಡ ಮತ್ತು ರಘು ಗೌಡ ನಡುವೆ ತೀವ್ರ ವಾಗ್ವಾದ ನಡೆದು, ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮನೆ ಕೆಲಸದ ವಿಚಾರದಿಂದ ಆರಂಭವಾದ ಜಗಳ
ಮನೆಯಲ್ಲಿ ಇಂದು ಮಾಡಬೇಕಾದ ಕೆಲಸಗಳ ಬಗ್ಗೆ ನಡೆದ ಚರ್ಚೆ ವೇಳೆ ರಘು, ಕ್ಯಾಪ್ಟನ್ ಆಗಿರುವ ಕಾರಣ, ಅಶ್ವಿನಿಗೆ ಕ್ಲೀನ್ ಮಾಡುವ ಕೆಲಸ ಹಂಚಿದರು. ಆದರೆ ಅಶ್ವಿನಿ ತಮ್ಮ ಆರೋಗ್ಯ ಕಾರಣದಿಂದ 10 ನಿಮಿಷ ವಿಶ್ರಾಂತಿ ಬೇಕೆಂದು ಹೇಳಿದರು. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆಯಾಯಿತು.
ಇದನ್ನು ಓದಿ : Raichur : ಮಂತ್ರಾಲಯ ಹುಂಡಿ ಎಣಿಕೆ – 34 ದಿನದಲ್ಲಿ 5.41 ಕೋಟಿ ಕಾಣಿಕೆ ಸಂಗ್ರಹ
ಅಶ್ವಿನಿ & ರಘು ಮಧ್ಯೆ ನಡೆದ ಮಾತಿನ ಚಕಮಕಿ ಹೀಗಿದೆ
ರಘು: ಎಲ್ಲಪ್ಪ ಅಶ್ವಿನಿ ಅವರು..? ಅವರಿಗೆ ಕ್ಲೀನ್ ಮಾಡೋಕೆ ಹೇಳಿ.
ಅಶ್ವಿನಿ ಗೌಡ: 10 ನಿಮಿಷ ರೆಸ್ಟ್ ಬೇಕು, ನನಗೆ ಬ್ಯಾಕ್ ಪೇಯ್ನ್ ಆಗ್ತಿದೆ, ಮಾಡ್ತಿನಿ.
ರಘು: 10 ನಿಮಿಷದಲ್ಲಿ ಬ್ಯಾಕ್ ಪೇಯ್ನ್ ಕಮ್ಮಿ ಆಗಿಬಿಡುತ್ತಾ? ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ. ಮಾತು ಮಾತ್ರ ಆಡ್ತಾರೆ.
ಅಶ್ವಿನಿ: ಹೇಯ್.. ಮಾಡಲ್ಲ ಹೋಗ್ರಿ!
ರಘು: ಹೇಯ್, ಮಾಡ್ಕೋಬೇಡ ಹೋಗು.
ಅಶ್ವಿನಿ: ಹೋಗು ಗೀಗು ಅಂತ ಮಾತನಾಡೋ ಅಧಿಕಾರ ನಿಂಗಿಲ್ಲ. ಏಕವಚನದಲ್ಲಿ ಮಾತನಾಡಬೇಡ. ನೀನು ಯಾರು ಏಕವಚನದಲ್ಲಿ ಮಾನಾಡೋಕೆ?
ರಘು: ಕೈ ತೋರಿಸಿಬೇಡ.. ಕೈ ಇಳಿಸು. ಎಷ್ಟು ಅಂತ ಮರ್ಯಾದೆ ಕೊಡಲಿ? ಯಾಕ್ ಕೈ ತೋರಿಸ್ತಾ ಇದ್ದೀಯಾ ನೀನು? ಹೋಗೆ..
ಅಶ್ವಿನಿ: ಯಾವನೋ ನೀನು ಲೇಯ್… ಈಗಲೇ ಕಳುಹಿಸಿ ಆಚೆ ನನ್ನನ್ನು.. ಬಿಗ್ ಬಾಸ್ ಕಳುಹಿಸಿ.. ನಾನು ಇರಲ್ಲ.
ನನ್ನನ್ನು ಈಗಲೇ ಹೊರಗೆ ಕಳುಹಿಸಿ
ಜಗಳದ ನಂತರ ಅಶ್ವಿನಿ ಭಾವುಕರಾಗಿ ಮನೆಯ ಬಾಗಿಲು ಬಡಿದು, “ನನ್ನನ್ನು ಈಗಲೇ ಹೊರಗೆ ಕಳುಹಿಸಿ. ನಾನು ಇನ್ನು ಇರಲ್ಲ” ಎಂದು ಕಣ್ಣೀರು ಹಾಕಿರುವ ದೃಶ್ಯವೂ ಪ್ರೋಮೋದಲ್ಲಿ ಕಾಣಿಸಿತು. ಮನೆಯ ಸದಸ್ಯರು ಅಶ್ವಿನಿಯನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದರೂ, ಅವರು ಮನೆಯಿಂದ ಹೊರ ಹೋಗಬೇಕು ಎಂಬ ನಿರ್ಧಾರದಲ್ಲೇ ನಿಂತಿರುವಂತೆ ಕಂಡುಬಂದಿದೆ.
ಇಂದಿನ ಎಪಿಸೋಡಿನಲ್ಲಿ ತಿಳಿಯಲಿದೆ ಮುಂದೇನಾಗುತ್ತದೆ?
ಈ ಘಟನೆ ಬಳಿಕ ಮನೆಯ ವಾತಾವರಣ ಗಂಭೀರಗೊಂಡಿದ್ದು, ಅಶ್ವಿನಿ ಮನೆ ಬಿಡುತ್ತಾರಾ ಅಥವಾ ಸಹಸ್ಪರ್ಧಿಗಳ ಮನವಿಗೆ ಮಣಿದು ಉಳಿಯುತ್ತಾರಾ ಎಂಬ ಕುತೂಹಲ ಹೆಚ್ಚಿದೆ. ಇದಕ್ಕೆ ಉತ್ತರ ಇಂದಿನ (ನ. 19) ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ.
ಇದನ್ನು ನೋಡಿ : ಜಲ ಸಂಚಯನ್–ಜನ ಭಾಗೀದಾರ್’ ಪ್ರಶಸ್ತಿ ಪ್ರಶಸ್ತಿಗೆ ಭಾಜನರಾದ ಜಿ.ಪಂ. CEO PRABHU




