Viral News : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಹೃದಯಕ್ಕೆ ತುಂಬಾ ಹತ್ತಿರವಾಗಿ ಬಿಡುತ್ತವೆ.

Viral News : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಹೃದಯಕ್ಕೆ ತುಂಬಾ ಹತ್ತಿರವಾಗಿ ಬಿಡುತ್ತವೆ. ಜೊತೆಗೆ ಮಿಲಿಯನ್ಸ್ ಗಟ್ಟಲೆ ವೀವ್ಸ್ ಪಡೆದುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಫುಲ್ ಹವಾ ಸೃಷ್ಟಿ ಮಾಡಿಬಿಡುತ್ತದೆ. ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ತನಗೆ ಇಷ್ಟವಾದ ನಾಯಿಯನ್ನು ಹೊತ್ತುಕೊಂಡು ಊರೂರು ಸುತ್ತುತ್ತಿದ್ದಾನೆ.
ವಿಡಿಯೋ ವೈರಲ್
ಆ ವ್ಯಕ್ತಿಗೆ ಶ್ವಾನವೇ ತನ್ನ ಪ್ರಪಂಚವಾಗಿದೆ. ಮನೆಯ ಮುದ್ದಿನ ಶ್ವಾನವನ್ನು ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತುತ್ತಿರುವ ಹೃದಯ ಸ್ಪರ್ಶಿ ದೃಶ್ಯ ನೋಡುಗರ ಗಮನ ಸೆಳೆಯುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಸ್ವಾರ್ಥ ಪ್ರೀತಿಗೆ ನೋಡುಗರು ಫುಲ್ ಫಿದಾ ಆಗಿದ್ದಾರೆ.
ಇದನ್ನು ಓದಿ : ಉಗ್ರಂ ಮಂಜು ಅವರ ಭಾವಿ ಪತ್ನಿಯನ್ನ ಭೇಟಿಯಾದ ಗೌತಮಿ ಜಾಧವ್
ನಾಯಿಯನ್ನ ಹೆಗಲ ಮೇಲೆ ಹೊತ್ತು ನಡೆದ ವ್ಯಕ್ತಿ
ನಿಷ್ಠೆ, ನಿಯತ್ತು, ನಿಷ್ಕಲ್ಮಶ ಪ್ರೀತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಈ ಶ್ವಾನ. ಶ್ವಾನ ಎಂದರೆ ಎಲ್ಲರಿಗೂ ಕೂಡ ಇಷ್ಟಾನೇ. ಒಂದು ಹೊತ್ತು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಋಣಿಯಾಗಿರುತ್ತದೆ. ಮನೆಯ ಮುದ್ದಿನ ಶ್ವಾನಗಳನ್ನು ತಮ್ಮ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಆದರೆ, ಇದೀಗ ವ್ಯಕ್ತಿಯೊಬ್ಬ ನಾಯಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತಿದ್ದಾನೆ. ಮಕ್ಕಳಂತೆ ತನ್ನ ಹೆಗಲ ಮೇಲೆ ಹೊತ್ತು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ
ಬಿನಾಯ್ ಜೋಸೆಫ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಶ್ವಾನವು ಮಕ್ಕಳಿಗಿಂತ ಹೆಚ್ಚಾಗಿದೆ. ತನ್ನ ಹೆಗಲ ಮೇಲೆ ಹೊತ್ತುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಎಲ್ಲರ ಚಿತ್ತ ಆ ವ್ಯಕ್ತಿ ಮತ್ತು ಹೆಗಲ ಕೂತಿರುವ ಶ್ವಾನದತ್ತ ಎನ್ನುವಂತಾಗಿದೆ.
ಇದನ್ನು ನೋಡಿ : ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಕೌಂಟ್ಡೌನ್




