Ugram Manju : ಇತ್ತೀಚಿಗೆ ಉಗ್ರಂ ಮಂಜು ಸಂಧ್ಯಾ ಖುಷಿ ಎಂಬವವರ ಜೊತೆ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕೆ ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದೆ ಜೋಡಿ.

ಬಿಗ್ ಬಾಸ್ ಮನೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಅವರ ಸ್ನೇಹ ಇಂದು ಕೂಡ ಅಷ್ಟೇ ಗಟ್ಟಿಯಾಗಿ ಮುಂದುವರಿದಿದೆ. ಬಿಗ್ ಬಾಸ್ ದಿನಗಳಿಂದಲೂ ಇಬ್ಬರದ್ದೇ ವಿಶೇಷ ಬಾಂಧವ್ಯ ಇತ್ತು.
ಇತ್ತೀಚೆಗೆ ಮಂಜು ಮತ್ತು ಗೌತಮಿ ದಂಪತಿ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಈಗ ಈ ಗೆಳೆತನದ ವಲಯಕ್ಕೆ ಮಂಜುವಿನ ಭಾವಿ ಪತ್ನಿ ಸಂಧ್ಯಾ ಖುಷಿ ಕೂಡ ಸೇರ್ಪಡೆಯಾಗಿದ್ದಾರೆ.
“Congratulations… ಖುಷಿಯಾದ ಜೀವನ ನಿಮ್ಮದಾಗಲಿ”
ಉಗ್ರಂ ಮಂಜು ಇತ್ತೀಚೆಗೆ ಸಂಧ್ಯಾ ಖುಷಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅದರ ನಂತರ ಇದೇ ಮೊದಲ ಬಾರಿಗೆ ಜೋಡಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿ ದ್ದು ಅಭಿಮಾನಿಗಳ ಗಮನ ಸೆಳೆದಿದೆ.
ಇದನ್ನು ಓದಿ : ಚಿ.ನಾ.ಹಳ್ಳಿಯ ಶೆಟ್ಟಿಕೆರೆಯಲ್ಲಿ ಹೆಚ್ಚಾಯ್ತು ಚಿರತೆ ಕಾಟ

ಗೌತಮಿ ಜಾಧವ್ ಹಾಗೂ ಅವರ ಪತಿ ಅಭಿಷೇಕ್ ಉಗ್ರಂ ಮಂಜು ಮತ್ತು ಸಂಧ್ಯಾ ಖುಷಿ ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ್ದಾರೆ. ಗೌತಮಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು, “Congratulations… ಖುಷಿಯಾದ ಜೀವನ ನಿಮ್ಮದಾಗಲಿ” ಎಂದು ಜೋಡಿಗೆ ಹಾರೈಸಿದ್ದಾರೆ.
ಶೀಘ್ರದಲ್ಲೇ ಮದುವೆ
ಉಗ್ರಂ ಮಂಜು ಮತ್ತು ಸಂಧ್ಯಾ ಖುಷಿಯ ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ಜೋಡಿ ಶೀಘ್ರದಲ್ಲೇ ಹಸ ಮಣೆ ಏರಲಿದ್ದಾರೆ. ಅಭಿಮಾನಿಗಳು ಕೂಡ ಮಂಜು–ಸಂಧ್ಯಾ ಜೋಡಿಗೆ ಶುಭ ಹಾರೈಸುತ್ತಿದ್ದು, ಅವರ ಮದುವೆ ಕುರಿತು ಹೆಚ್ಚಿನ ವಿವರಗಳಿಗೆ ಕಾತರರಾಗಿದ್ದಾರೆ.

ಇದನ್ನು ನೋಡಿ : ಒಂದ್ಕಡೆ ಬೋನಿಗೆ ಬಿದ್ದ ಚಿರತೆ – ಮತ್ತೊಂದ್ಕಡೆ ಚಿರತೆ ಪ್ರತ್ಯಕ್ಷ




