Chikkanayakanahalli : ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿ ಶೆಟ್ಟಿಕೆರೆ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಸುತ್ತಮುತ್ತಲ ಜನರು ಬೆಚ್ಚಿಬಿದ್ದಿದ್ದಾರೆ

Chikkanayakanahalli : ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿ ಶೆಟ್ಟಿಕೆರೆ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಸುತ್ತಮುತ್ತಲ ಜನರು ಬೆಚ್ಚಿಬಿದ್ದಿದ್ದಾರೆ. ಇನ್ನು ಈ ಗ್ರಾಮದ ಸುತ್ತಮುತ್ತ 20 ರಿಂದ 30 ಮನೆಗಳು ಇವೆ.
ಇದನ್ನು ಓದಿ : S. S. Rajamouli : ʻವಾರಣಾಸಿʼ ಡೈರೆಕ್ಟರ್ ರಾಜಮೌಳಿ ವಿರುದ್ಧ ದೂರು ದಾಖಲು!
3 ತಿಂಗಳಿಂದ ಗ್ರಾಮಸ್ಥರಿಗೆ ಚಿರತೆ ಕಾಟ
ಕಳೆದ ಮೂರು ತಿಂಗಳಿಂದಲೂ ಇಲ್ಲಿನ ಗ್ರಾಮಸ್ಥರಿಗೆ ಚಿರತೆ ಕಾಟ ಹೆಚ್ಚಾಗಿದೆ. ಸಂಜೆ 6 ಗಂಟೆಯ ನಂತರ ಜನರು ಓಡಾಡಲು ಭಯಪಡುವಂತಾಗಿದೆ. ಇತ್ತ ಉಮೇಶ್ ಎಂಬುವವರ ತೋಟದ ಮನೆಯಲ್ಲಿ ಚಿರತೆ ಪ್ರತ್ಯೇಕ್ಷವಾಗಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಹಸು, ಕುರಿ, ಮೇಕೆ, ನಾಯಿಗಳ ಮೇಲೆ ಚಿರತೆ ದಾಳಿ
ಇನ್ನು ಈ ಚಿರತೆ ಗ್ರಾಮದಲ್ಲಿ ಸಾಕಿರುವ ಹಸು, ಕುರಿ, ಮೇಕೆ, ನಾಯಿಗಳ ಮೇಲೆ ದಾಳಿ ಮಾಡಿ ಹೊತ್ತೋಯ್ಯುತ್ತಿದೆ. ರಸ್ತೆಯ ಅಕ್ಕಪಕ್ಕ ಗಿಡಗಂಟೆಗಳು ಬೆಳೆದಿದ್ದು, ಓಡಾಡಲು ಭಯಪಡುತ್ತಿದ್ದಾರೆ ಜನರು. ಕೂಡಲೇ ಗಿಡಗಂಟೆಗಳನ್ನು ತೆರವುಗೊಳಿಸಿ, ಚಿರತೆಯನ್ನು ಸೆರೆಯಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನು ನೋಡಿ : TIPTUR | ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಕ್ ಕೊಟ್ಟ ಶಾಸಕ ಷಡಕ್ಷರಿ




