Gowribidanur Crime News : ಕುಡಿಯಬೇಡ ಅಂದಿದ್ದೇ ತಪ್ಪಾಯ್ತು: ಪತ್ನಿಯನ್ನು ಕೊಂದ ಪಾಪಿ ಪತಿ – ಹುದುಗೂರು ಗ್ರಾಮದಲ್ಲಿ ದಾರುಣ

Gowribidanur Crime News : ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹುದುಗೂರು ಗ್ರಾಮದಲ್ಲಿ ಗಂಡ-ಹೆಂಡತಿ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಕಿಗೆ ಬಂದಿದೆ.ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಪತಿಯೇ ಪತ್ನಿಯನ್ನು ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾನೆ.
4 ವರ್ಷದ ಗಂಡು ಮಗು ಅನಾಥ
ಮೃತೆಯಾಗಿರುವ ಮಹಿಳೆ ಪಾವನಿ (30).ಪತಿಯೇ ಕೊಲೆಗೈದಿರುವುದು ದೃಢಪಟ್ಟಿದ್ದು, ಆರೋಪಿಯಾಗಿರುವ ರಾಘವೇಂದ್ರವನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಪರಿಣಾಮವಾಗಿ—ತಾಯಿ ಮೃತಪಟ್ಟಿದ್ದಾಳೆ , ತಂದೆ ಜೈಲಿಗೆ ಸೇರಿದ್ದಾನೆ ,4 ವರ್ಷದ ಗಂಡು ಮಗು ಸಂಪೂರ್ಣ ಅನಾಥವಾಗಿದೆ .
MUST READ : Tumakuru Metro Project : ಸಂಸದ ತೇಜಸ್ವಿ ಸೂರ್ಯ ಆಕ್ಷೇಪ | RRTS ಉತ್ತಮ ಆಯ್ಕೆ ಎಂದು ಅಭಿಪ್ರಾಯ
ಮದುವೆಗೆ ಐದು ವರ್ಷ, ಆದರೆ ಜಗಳಕ್ಕೆ ಕಾರಣ ಏನು?
ಪಾವನಿ ಹಾಗೂ ರಾಘವೇಂದ್ರ ಐದು ವರ್ಷಗಳ ಹಿಂದೆ ಮದುವೆಯಾದ ದಂಪತಿ.
ಮೊನ್ನೆ ರಾಘವೇಂದ್ರ ಊರಿಗೆ ಬಂದಿದ್ದರೂ ಮನೆಗೆ ತೆರಳಿರಲಿಲ್ಲ. ಈ ಬಗ್ಗೆ ಪಾವನಿ ಪ್ರಶ್ನಿಸಿದಾಗ ಜಗಳ ಶುರುವಾಯಿತು.
“ಊರಿಗೆ ಬಂದಿದ್ದೀಯಾ, ಆದರೆ ಮನೆಗೆ ಯಾಕೆ ಬರ್ಲಿಲ್ಲ? ಕುಡಿದು ಎಲ್ಲೋ ಬಿದ್ದಿದ್ದಿಯಾ?”
ಈ ಮಾತಿಗೆ ಕೆರಳಿದ ರಾಘವೇಂದ್ರ ಪತ್ನಿಯೊಂದಿಗೆ ಗಲಾಟೆ ಆರಂಭಿಸಿದ , ಜಗಳ ವಿಕೋಪಗೊಂಡು , ಕುತ್ತಿಗೆಗೆ ವೇಲ್ ಬಿಗಿದು ಪಾವನಿಯನ್ನು ಹತ್ಯೆ ಮಾಡಿದ್ದಾನೆ
ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದರು
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಗೌರಿಬಿದನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪತಿ ರಾಘವೇಂದ್ರನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ . ಮುಂದಿನ ತನಿಖೆ ಪ್ರಗತಿಯಲ್ಲಿದೆ .
ಇದನ್ನು ನೋಡಿ : AMANI KERE PARK ಎದುರು ಗುಂಡಿ ಕಾಟ – ನಿತ್ಯ ಜೀವಭಯದಲ್ಲಿ ಸವಾರರ ಸಂಚಾರ




