BBK : ಗಿಲ್ಲಿ ಅವರು ಸುದೀಪ್ ಅವರನ್ನ ಇಮಿಟೇಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅಂತೂ ಬಿದ್ದು ಬಿದ್ದು ನಕ್ಕಿದ್ದಾರೆ .ಉಳಿದ ಸ್ಪರ್ಧಿಗಳು ನಗೆಗಡಲಲ್ಲಿ ತೇಲಿದ್ದಾರೆ.

BBK : ಶನಿವಾರ ಕಿಚ್ಚ ಸುದೀಪ್ (Kichcha Sudeep) ಅವರು ಸ್ಪರ್ಧಿಗಳಿಗೆ ಮಾಸ್ ಕ್ಲಾಸ್ ತೆಗೆದುಕೊಂಡರೆ, ಭಾನುವಾರ ಮಾತ್ರ ಸ್ಪರ್ಧಿಗಳೊಂದಿಗೆ ತಮಾಷೆ ಮಾಡ್ತಾರೆ. ಈಗ ಹೊಸ ಪ್ರೋಮೋದಲ್ಲಿ ಗಿಲ್ಲಿ ಅವರು ಕಿಚ್ಚ ಸುದೀಪ್ ಆಗಿದ್ದಾರೆ. ಹೌದು ಸುದೀಪ್ ಅವರನ್ನ ಇಮಿಟೇಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅಂತೂ ಬಿದ್ದು ಬಿದ್ದು ನಕ್ಕಿದ್ದಾರೆ. ಉಳಿದ ಸ್ಪರ್ಧಿಗಳು ನಗೆಗಡಲಲ್ಲಿ ತೇಲಿದ್ದಾರೆ.
ಗಿಲ್ಲಿಯ ಮಸ್ತ್ ಕಾಮಿಡಿ
ಮೊದಲಿಗೆ ಕಿಚ್ಚ ಅವರು, “ಇಂದು ನನ್ನನ್ನು ಗಿಲ್ಲಿ ಅವರು ಇಮಿಟೇಟ್ ಮಾಡಬೇಕು” ಎಂದು ಹೇಳುತ್ತಾರೆ. ಗಿಲ್ಲಿ ಸ್ಟೈಲ್ ನಕಲಿಸಲು ಕಿಚ್ಚ ಸುದೀಪ್ ಕೂಡಾ ಕ್ಷಣಕಾಲ ಗಿಲ್ಲಿಯಾಗಿಯೇ ನಿಂತುಕೊಳ್ಳುವ ಸನ್ನಿವೇಶ ಕೂಡಾ ಪ್ರೋಮೋದಲ್ಲಿದೆ.
ಇದನ್ನು ಓದಿ : Madikeri : ಪತ್ನಿಗೆ ವೀಡಿಯೋ ಕಾಲ್ ಮಾಡಿ ಪತಿ Live Suicide!
ಅ ನಂತರ ಸುದೀಪ್ ತಮ್ಮ ಬ್ರೆಸ್ಲೆಟ್ ಹಾಕಿಕೊಂಡು, ತಮಾಷೆಯ ಡೈಲಾಗ್ ಹೊಡೆದರು. “ನೋಡಿ ರಿಷಾ ಅವರೇ, ಈ ಮನೆಯಲ್ಲಿ ಕೂಗಾಡಿದ್ರೆ ಮಾತ್ರ ಪ್ರಾಬ್ಲಂ ಆಗಲ್ಲ… ವಾಂತಿ ಮಾಡಿದ್ರೂ ಆಗತ್ತೆ!” ಇದನ್ನು ಕೇಳಿ ಮನೆಯಲ್ಲಿ ನಕ್ಕಿದ್ಧಾರೆ.
ಕಾವ್ಯಾಗೆ ಗಿಲ್ಲಿ ಕವನ
ಕಾವ್ಯ ಅವರಿಗೆ ಗಿಲ್ಲಿ ಕವನ ಮೂಲಕ ಡೈಲಾಗ್ ಕೊಟ್ಟರು. ʻಬಿಗ್ ಬಾಸ್ ಮನೆಯಲ್ಲಿ ನಾನು ಒಂಥರ ಅಪ್ಸರಾ. ಅವಳ ಕಣ್ಣುಗಳ ನೋಡೋದಕ್ಕೆ ಸುಂದರʼ ಎಂದು ಹೇಳಿದ್ದಾರೆ. ಅದಕ್ಕೆ ಸುದೀಪ್ ಅವರು, ʻನಾನು ಹೇಳಿದ ಹಾಗೇ ಇಲ್ವಲ್ಲʼ ಎಂದು ಗಿಲ್ಲಿ ಕಾಳೆಲದರು. ಆದ್ರೆ ಗಿಲ್ಲಿ ಸುದೀಪ್ ಅವರ ಡೈಲಾಗ್ನಂತೆ, ʻಕೊನೆಯಲ್ಲಿ ಹೇಳಬೇಕು ಅನ್ನಿಸಿತು ಹೇಳ್ದೆʼ ಎಂದಿದ್ದಾರೆ. ಹೀಗೆ ಹೇಳುತ್ತಲೇ ಕಿಚ್ಚ ನಕ್ಕಿದ್ದಾರೆ.
ಇದನ್ನು ನೋಡಿ : ಶಾಲೆಗೆ 10 ನಿಮಿಷ ತಡವಾಗಿ ಬಂದ ಬಾಲಕಿಗೆ ಘೋರ ಶಿಕ್ಷೆ; ನೋವಿನಿಂದ ಒದ್ದಾಡಿ ಪ್ರಾಣಬಿಟ್ಟ ವಿದ್ಯಾರ್ಥಿನಿ: ಮಕ್ಕಳ ದಿನಾಚರಣೆಯಂದೇ ದುರಂತ




