Suicide Case : ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಲೈವ್ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಸಮೀಪದ ಸಿಂಕೋನ ಪ್ರದೇಶದಲ್ಲಿ ನಡೆದಿದೆ.

ತನ್ನ ಪತ್ನಿಗೆ Video Call ಮಾಡಿ ಲೈವ್ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ (Madikeri) ಸಮೀಪದ ಸಿಂಕೋನ ಪ್ರದೇಶದಲ್ಲಿ ನಡೆದಿದೆ.
ಪತ್ನಿಗೆ ವಿಡಿಯೋ ಕಾಲ್ ಮಾಡಿ ಲೈವ್ನಲ್ಲಿ ಆತ್ಮಹತ್ಯೆ
ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ (36) ಎಂಬುವವರು ತಮ್ಮ ಪತ್ನಿಗೆ ವಿಡಿಯೋ ಕಾಲ್ ಮಾಡಿ ಲೈವ್ನಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಇದನ್ನು ಓದಿ : ತಿಪಟೂರಿನಲ್ಲಿ ಸಿಗರೇಟ್ ಸೇದಿ ಮೋಜು ಮಸ್ತಿ ಮಾಡಿದ ವಿದ್ಯಾರ್ಥಿನಿಯರು
ಮನನೊಂದ ಪತಿ ಆತ್ಮಹತ್ಯೆಗೆ ಶರಣು
ಕೀರ್ತನ್ ಕಳ್ಳತನ ಪ್ರಕರಣದಲ್ಲಿ ಕೆಲವು ಕಾಲ ಜೈಲಿನಲ್ಲಿದ್ದು ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದರು. ಕೀರ್ತನ್ ಜೈಲಿನಲ್ಲಿ ಇದ್ದ ಅವಧಿಯಲ್ಲಿ, ಅವರ ಪತ್ನಿ ಜ್ಯೋತಿ ತಮ್ಮ ತವಿರಿಗೆ ಹೋಗಿದ್ದರು. ಜೈಲಿನಿಂದ ಬಿಡುಗಡೆಯಾದ ಕೀರ್ತನ್ ನವೆಂಬರ್ 15ರ ಸಂಜೆ ಪತ್ನಿಯನ್ನು ಮನೆಗೆ ಕರೆತರಲು ಹೋಗಿದ್ದು, ಅವರು ಬರಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಪತಿ ನಿನ್ನೆ ಸಂಜೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಹಿಂದೆ ಕೂಡಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೀರ್ತನ್ ಹಲವು ಬಾರಿ ಬೆದರಿಕೆ ಹಾಕಿದ್ದನು ಎನ್ನಲಾಗಿದೆ. ಇಂದು ಅವರ ಮೃತದೇಹ ಪತ್ತೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ʻಒಳ್ಳೆ ಮಾರ್ಕ್ಸ್ ಕೊಡ್ತೀನಿ ಮಜಾ ಮಾಡೋಣ ಬಾʼ ಅಂತ ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!




