Tiptur News : ಕಾಲ ಎಷ್ಟು ಅದ್ವಾನ ಎದ್ದಿದೆ ಅಂದ್ರೆ ಯುವ ಪೀಳಿಗೆಯು ಮೋಜು ಮಸ್ತಿಯ ಹಿಂದೆ ಬಿದ್ದು, ತಮ್ಮ ಸುಂದರವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

Tiptur News : ತಮ್ಮ ಸುಂದರವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಗಾಂಜಾ, ಬೀಡಿ,ಎಣ್ಣೆ, ಸಿಗರೇಟ್ ಸೇದಿಕೊಂಡು ಕಾಲೇಜು ಜೀವನನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಅದೆಷ್ಟೋ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗಿ, ಸಿಗದಿದ್ದಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ತಲುಪುತ್ತಿದ್ದಾರೆ.
ಸ್ಟೈಲಾಗಿ ದಮ್ ಎಳೆದ ಕಾಲೇಜು ವಿದ್ಯಾರ್ಥಿನಿಯರು
ಹೆತ್ತ ತಂದೆ ತಾಯಿ ತಮ್ಮ ಮಕ್ಕಳ ಓದಿ ವಿದ್ಯಾವಂತರಾಗಿ ಬದುಕನ್ನು ಕಟ್ಟಿಕೊಳ್ಳಲಿ ಅಂತ ಶಾಲಾ-ಕಾಲೇಜಿಗೆ ಕಳುಹಿಸುತ್ತಾರೆ. ಆದ್ರೆ ಯುವಜನತೆ ಮಾತ್ರ ಮೋಜು ಮಸ್ತಿಯ ಹಿಂದೆ ಬಿದ್ದಿದ್ದಾರೆ. ಯುವಕರ ಕಥೆ ಒಂದು ರೀತಿಯಾದ್ರೆ ಇತ್ತ ಹುಡುಗಿಯರು ಕೂಡ ಮಾದಕ ದ್ರವ್ಯ ಸೇವನೆ ಮಾಡುವುದರಲ್ಲಿ ಎತ್ತಿದ ಕೈ ಆಗುತ್ತಿದ್ದಾರೆ.
ತಿಪಟೂರಿನಲ್ಲಿ ಬಾಲಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸ್ಟೈಲ್ ಆಗಿ ಸಿಗರೇಟ್ ಸೇದಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನು ಓದಿ : Tumakuru : ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಮಾಡಿ ಕಳ್ಳರು ಎಸ್ಕೇಪ್
ತಿಪಟೂರಿನಲ್ಲಿ ಸ್ಮೋಕ್ ಮಾಡಿ ಗರ್ಲ್ಸ್ ಫುಲ್ ಎಂಜಾಯ್
ತಿಪಟೂರು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿನಿಯರು, ರಾಜರೋಷವಾಗಿ ಧೂಮಪಾನದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿದ್ಯಾರ್ಥಿನಿಯರ ಈ ಅಸಭ್ಯ ವರ್ತನೆ ಸಮಾಜದ ಪ್ರತಿಯೊಬ್ಬ ಹೆಣ್ಣು ಮಕ್ಕಳ ಪರಿಸ್ಥಿತಿ ಯಾವ ಹಂತದಲ್ಲಿದೆ ಎನ್ನುವುದನ್ನು ತೋರಿಸುತ್ತಿದೆ ಎಂದರು ತಪ್ಪಾಗಲಾರದು.
ದಮ್ ಎಳೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇನ್ನು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಲ್ಪತರು ಕ್ರೀಡಾಂಗಣದಲ್ಲಿ, ಸಾಮೂಹಿಕವಾಗಿ ಧೂಮಪಾನದಲ್ಲಿ ತೊಡಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯರ ಈ ನಡೆಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ.
ಕಾಲೇಜಿನ ಸಮವಸ್ತ್ರದಲ್ಲಿ ಸಿಗರೇಟ್ ಸೇದುತ್ತಿರುವ ಈ ವಿದ್ಯಾರ್ಥಿನಿಯರು ಕಾಲೇಜು ಕೇವಲ ಮೀಟರ್ ಗಳ ಅಂತರದಲ್ಲಿ ಇರುವುದು ಕಾಣಬಹುದು.
ಇದನ್ನು ನೋಡಿ : ಮೇಕೆದಾಟು ಯೋಜನೆಯಲ್ಲಿ ರಾಜ್ಯಕ್ಕೆ ಗೆಲುವು ರಾಜ್ಯದ ಪರ ತೀರ್ಪು ನೀಡಿದ ಸುಪ್ರೀಂ ಕೋರ್ಟ್




