Bengaluru–Mysuru Special Train : ಸೌತ್ ವೆಸ್ಟರ್ನ್ ರೈಲ್ವೇ ನವೆಂಬರ್ 14ರಿಂದ ಡಿಸೆಂಬರ್ 28ರವರೆಗೆ ಬೆಂಗಳೂರು-ಮೈಸೂರು ನಡುವೆ ಮೆಮು ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ.

Bengaluru–Mysuru Special Train : ವಾರಾಂತ್ಯಗಳು ಮತ್ತು ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವದ ಹಿನ್ನಲೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ, ಕೆಎಸ್ಆರ್ ಬೆಂಗಳೂರು ಮತ್ತು ಅಶೋಕಪುರಂ (ಮೈಸೂರು) ನಡುವೆ ಮೆಮು ವಿಶೇಷ ರೈಲು ಸಂಚಾರಕ್ಕೆ ಸೌತ್ ವೆಸ್ಟರ್ನ್ ರೈಲ್ವೇ ತಿಳಿಸಿದೆ.
ರೈಲು ಸಂಚಾರ ವಿವರಗಳು
- ಈ ವಿಶೇಷ ರೈಲುಗಳು ನವೆಂಬರ್ 14ರಿಂದ ಡಿಸೆಂಬರ್ 28ರವರೆಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಚರಿಸಲಿವೆ.
- ಆದರೆ, ನವೆಂಬರ್ 21, 22 ಮತ್ತು 23 ರಂದು ರೈಲು ಸಂಚಾರ ಇರೋದಿಲ್ಲ.
ಪ್ರಮುಖ ರೈಲು ಸಮಯಗಳು
- ರೈಲು ಸಂಖ್ಯೆ 06213: ಕೆಎಸ್ಆರ್ ಬೆಂಗಳೂರಿನಿಂದ ಮಧ್ಯಾಹ್ನ 12.15ಕ್ಕೆ ಹೊರಡಿ, ಅಶೋಕಪುರಂಗೆ ಮಧ್ಯಾಹ್ನ 3.40ಕ್ಕೆ ತಲುಪಲಿದೆ.
- ರೈಲು ಸಂಖ್ಯೆ 06214: ಅಶೋಕಪುರಂನಿಂದ ಸಂಜೆ 4.10ಕ್ಕೆ ಹೊರಡಲಿದ್ದು, ಕೆಎಸ್ಆರ್ ಬೆಂಗಳೂರಿಗೆ ರಾತ್ರಿ 8 ಗಂಟೆಗೆ ತಲುಪಲಿದೆ.
ಇದನ್ನು ಓದಿ : Ekka Movie : OTT ಗೆ ಬಂತು ಕನ್ನಡದ ಹಿಟ್ ಸಿನಿಮಾ ‘ಎಕ್ಕ’
ಮೆಮು ರೈಲು ನಿಲುಗಡೆಗಳು
ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತೀ ಹಾಲ್ಟ್, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಸತ್ತಿಹಳ್ಳಿ, ನಿಡಘಟ್ಟ ಹಾಲ್ಟ್, ಮದ್ದೂರು, ಹನಕೇರಿ, ಮಂಡ್ಯ, ಯಲಿಯೂರು, ಬ್ಯಾದರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಮತ್ತು ಚಾಮರಾಜಪುರಂ ನಲ್ಲಿ ನಿಲುಗಡೆಗೊಳಿಸಲಾಗಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ತಿಳಿಸಿದೆ.
ಸಾಹಾಯಕರ ಆದಾಯ
2025–26ರ ಮೊದಲ ಏಳು ತಿಂಗಳಲ್ಲಿ, ವಿಶೇಷ ರೈಲುಗಳ ಸಂಚಾರದಿಂದ ಸೌತ್ ವೆಸ್ಟರ್ನ್ ರೈಲ್ವೇ ಆದಾಯದಲ್ಲಿ ಶೇಕಡಾ 23ರಷ್ಟು ಏರಿಕೆ ಕಂಡಿದೆ.
ಈ ವರ್ಷದ ಏಪ್ರಿಲ್ ರಿಂದ ಅಕ್ಟೋಬರ್ ತನಕ ಪ್ರಯಾಣಿಕರ ಅನುಕೂಲಕ್ಕಾಗಿ 355 ವಿಶೇಷ ರೈಲುಗಳು ಸಂಚರಿಸಿದ್ದವು. ಈ ಮೂಲಕ SWR 171.47 ಕೋಟಿ ರೂ. ಗಳಿಸಿದೆ.
ಹಿಂದೆ 2024–25ರ ಅವಧಿಯಲ್ಲಿ 351 ವಿಶೇಷ ರೈಲುಗಳಿಂದ 138.83 ಕೋಟಿ ರೂ. ಆದಾಯ ದಾಖಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ 19.55 ಲಕ್ಷ ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಇದನ್ನು ನೋಡಿ : AMAZON PRODUCT DELIVERY AGENCY ಏಜೆನ್ಸಿಯ ಕಳ್ಳಾಟ- ಉದ್ಯೋಗಿಗಳನ್ನು ಬೀದಿಗೆ ತಂದ ಕಂಪನಿ




