Ekka OTT Release : ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಕನ್ನಡ ಸಿನಿಮಾ ಈಗ ಸನ್ NXT ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ವೀಕೆಂಡ್ ಬಂತು ಎಂದರೆ, OTT ಯಲ್ಲಿ ಯಾವ ಸಿನಿಮಾ ವೀಕ್ಷಿಸಬಹುದು ಎಂದು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಪ್ರತಿ ವಾರ ಅನೇಕ ಸಿನಿಮಾಗಳು ಮತ್ತು Web Series ಗಳು ಬಿಡುಗಡೆ ಆಗುತ್ತವೆ. ಆದರೆ, ಕನ್ನಡದ ಸಿನಿಮಾಗಳು ಒಟಿಟಿಗೆ ಬರುತ್ತವೆ.
ಎಕ್ಕ ಸಿನಿಮಾ ಈಗ OTT ಪ್ರೇಕ್ಷರಿಗೆ ಲಭ್ಯ
ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಸಿನಿಮಾ (Ekka Movie) ಈಗ ಒಟಿಟಿ ಪ್ರೇಕ್ಷಕರಿಗೆ ಲಭ್ಯವಾಗಿದೆ. ‘ಎಕ್ಕ’ ಸಿನಿಮಾ ಜುಲೈ 18 ರಂದು ಥಿಯೇಟರ್ಗಳಲ್ಲಿ ರಿಲೀಸ್ ಆಗಿತ್ತು. ಇನ್ನು ಈ ಚಿತ್ರದಲ್ಲಿ ಯುವ ರಾಜ್ಕುಮಾರ್ ಹೀರೋ, ಸಂಜನಾ ಆನಂದ್ ನಾಯಕಿ, ಮತ್ತು ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಶುರುವಾಗಿರುವ ದಿನಗಳಲ್ಲಿ ಉತ್ತಮ ಓಪನಿಂಗ್ ಪಡೆದಿತ್ತು.
ಇದನ್ನು ಓದಿ : Arsikere : ಮರಕ್ಕೆ ಡಿಕ್ಕಿ ಹೊಡೆದ KSRTC ಬಸ್ – 15 ಜನರ ಸ್ಥಿತಿ ಗಂಭೀರ
SUN NXT OTT ಮೂಲಕ ಪ್ರಸಾರ
ಥಿಯೇಟರ್ನಲ್ಲಿ ಬಿಡುಗಡೆನಂತರ ಸುಮಾರು ನಾಲ್ಕು ತಿಂಗಳ ನಂತರ, ‘ಎಕ್ಕ’ SUN NXT OTT ಮೂಲಕ ಪ್ರಸಾರ ಆರಂಭವಾಗಿದೆ. ಸಾಮಾನ್ಯವಾಗಿ Zee 5 ಅಥವಾ Amazon Prime Video Subscription ಹೆಚ್ಚು ಜನರ ಬಳಿ ಇದೆ, ಆದರೆ ಸನ್ NXT ಸಬ್ಸ್ಕ್ರಿಪ್ಶನ್ ಹೊಂದಿರುವವರು ಕಡಿಮೆ. ಆದ್ದರಿಂದ ಕೆಲವರಿಗೆ ಈ ನಿರ್ಧಾರ ಸ್ವಲ್ಪ ಬೇಸರ ತಂದಿದೆ. ಮೊದಲು ಸಿನಿಮಾ ಜೀ5 ನಲ್ಲಿ ಬರುತ್ತದೆ ಎಂದು ಹೇಳಲಾಗಿತ್ತು.
ಎಕ್ಕ’ ಚಿತ್ರದ ಮೂಲಕ ಯುವ ರಾಜ್ಕುಮಾರ್ ಹೆಚ್ಚು ಜನಪ್ರಿಯತೆ
ಎಕ್ಕ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್, ಜಯಣ್ಣ-ಭೋಗೇಂದ್ರ, ಕಾರ್ತಿ ಗೌಡ ಮತ್ತು ಯೋಗಿ ರಾಜ್ ನಿರ್ಮಿಸಿದ್ದಾರೆ. ಚಿತ್ರದ Theame ಪುನೀತ್ ಅವರ ‘ಜಾಕಿ’ ಸಿನಿಮಾಗೆ ಹೋಲಿಕೆ ಮಾಡಲಾಗಿದೆ. ಇನ್ನು ‘ಎಕ್ಕ’ ಚಿತ್ರದ ಮೂಲಕ ಯುವ ರಾಜ್ಕುಮಾರ್ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
ಇದನ್ನು ನೋಡಿ : Kerala News: ಕಾರಾಗೃಹದಲ್ಲೇ ಜೈಲರ್ ಮೇಲೆ ಕೈದಿಗಳಿಂದ ಡೆಡ್ಲಿ ಅಟ್ಯಾಕ್!




