Ekka OTT Release : ಶುಕ್ರವಾರ ಬಂತಂದರೆ ಸಾಕು ಸಿನಿ ಪ್ರಿಯರು ಒಟಿಟಿಯಲ್ಲಿ ಹೊಸ ಸಿನಿಮಾಗಳನ್ನು ಸರ್ಚ್ ಮಾಡಲು ಶುರು ಮಾಡುತ್ತಾರೆ. ಇದೀಗ ಒಟಿಟಿ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಶುಕ್ರವಾರ ಬಂದರೆ ಸಾಕು ಸಿನಿಪ್ರಿಯರು ಹೊಸ ಸಿನಿಮಾಗಳಿಗಾಗಿ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಹುಡುಕಾಟ ಆರಂಭಿಸುತ್ತಾರೆ. ಇಂತಹ ಸಿನಿಪ್ರಿಯರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಯುವ ರಾಜ್ಕುಮಾರ್ (Yuva Rajkumar) ಅಭಿನಯದ ‘ಎಕ್ಕ’ (Ekka) ಸಿನಿಮಾ ಈಗ ತನ್ನ ಒಟಿಟಿ (OTT) ಪ್ರೀಮಿಯರ್ಗೆ ಸಿದ್ಧವಾಗಿದೆ.
ಎಲ್ಲಿ ಸ್ಟ್ರೀಮಿಂಗ್?
ಜುಲೈ 18, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಪ್ರಾರಂಭಿಕವಾಗಿ ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣೇಶ ಚತುರ್ಥಿಯ ಸಮಯದಲ್ಲಿ ಸ್ಟ್ರೀಮಿಂಗ್ಗೆ ಬರಬಹುದು ಎಂಬ ಊಹಾಪೋಹಗಳಿದ್ದರೂ ಆಗ ಆಗಲಿಲ್ಲ. ಇದೀಗ ಸನ್ನೆಕ್ಸ್ಟ್ OTT ಅಧಿಕೃತವಾಗಿ ಘೋಷಣೆ ಮಾಡಿದ್ದು, ನವೆಂಬರ್ 13, 2025ರಂದು ‘ಎಕ್ಕ’ ಸ್ಟ್ರೀಮಿಂಗ್ಗೆ ಬರುತ್ತಿದೆ ಎಂದು ತಿಳಿಸಿದೆ.
ಇದನ್ನು ನೋಡಿ : Ekka OTT: ದೊಡ್ಮನೆ ಅಭಿಮಾನಿಗಳಿಗೆ ಮನರಂಜನೆ ಫಿಕ್ಸ್
ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್
ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಮತ್ತು ಜಯಣ್ಣ ಫಿಲ್ಮ್ಸ್ ಸಂಯುಕ್ತ ನಿರ್ಮಾಣದ ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ನೀಡಿದ್ದಾರೆ. ಯುವ ರಾಜ್ಕುಮಾರ್ ಜೊತೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಆದಿತ್ಯಾ, ಶ್ರುತಿ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ಯಾಂಗಲ್ ಬಂಗಾರಿ ಹಾಡು ಹಿಟ್
ಚಿತ್ರದ ಛಾಯಾಗ್ರಹಣಕ್ಕೆ ಸತ್ಯ ಹೆಗಡೆ, ಸಂಗೀತಕ್ಕೆ ಚರಣ್ ರಾಜ್, ಮತ್ತು ಸಂಕಲನಕ್ಕೆ ದೀಪು ಎಸ್. ಕುಮಾರ್ ಹೊಣೆವಹಿಸಿದ್ದಾರೆ. ವಿಶೇಷವಾಗಿ ‘ಬ್ಯಾಂಗಲ್ ಬಂಗಾರಿ’ ಹಾಡು ಪ್ರೇಕ್ಷಕರಲ್ಲಿ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.
‘ಎಕ್ಕ’ ಸಿನಿಮಾಗೆ ಉತ್ತಮ ರೆಸ್ಪಾನ್ಸ್
ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ ‘ಎಕ್ಕ’ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಮರುವಾರವೇ ಬಿಡುಗಡೆಯಾದ ‘ಸು ಫ್ರಮ್ ಸೋ’ ಚಿತ್ರದ ಬಾಕ್ಸ್ಆಫೀಸ್ ಪ್ರಭಾವದಿಂದಾಗಿ ‘ಎಕ್ಕ’ ಪ್ರದರ್ಶನ ಕುಂಠಿತವಾಯಿತು.
‘ಎಕ್ಕ’ ನಂತರ ಯುವ ರಾಜ್ಕುಮಾರ್ ಮತ್ತು ನಿರ್ದೇಶಕ ಸೂರಿ ಕಾಂಬಿನೇಷನ್ನ ಹೊಸ ಚಿತ್ರ ಘೋಷಣೆ ಆಗಿದ್ದರೂ, ಕೆಲವು ಕಾರಣಗಳಿಂದ ಅದು ತಡವಾಗಿದೆ. ಆ ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ನಾಯಕಿಯಾಗಿ ಕಾಣಿಸಲಿದ್ದಾರೆ.

ಇದನ್ನು ಓದಿ : Ranya Rao Case : ₹123 ಕೋಟಿಯ ಗೋಲ್ಡ್ ಸ್ಮಗ್ಲಿಂಗ್ ಸಾಬೀತು – ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ




