Ranya Rao : ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಕೊನೆಯ ಹಂತ ತಲುಪಿದೆ.

ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ (Ranya Rao) ಅವರ ವಿರುದ್ಧದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ (Gold Smuggling Case) ಇದೀಗ ಕೊನೆಯ ಹಂತ ತಲುಪಿದೆ. ಕಳೆದ ಆರು ತಿಂಗಳಿನಿಂದ ಸುದೀರ್ಘ ತನಿಖೆ ನಡೆಸುತ್ತಿದ್ದ ಡೈರೆಕ್ಟರೇಟ್ ಆಫ್ ರೆವನು ಇಂಟೆಲಿಜೆನ್ಸ್ (DRI) ಇದೀಗ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ನಡೆಸುತ್ತಿದೆ.
ಐದು ಆರೋಪಿಗಳ ವಿರುದ್ಧ ಶೋ ಕಾಸ್ ನೋಟಿಸ್
ತನಿಖೆಯಲ್ಲಿ ₹123 ಕೋಟಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಒಟ್ಟು ಐದು ಆರೋಪಿಗಳ ವಿರುದ್ಧ ಶೋ ಕಾಸ್ ನೋಟಿಸ್ ನೀಡಲಾಗಿದ್ದು, ಅದರಲ್ಲಿ ಕೇವಲ ರನ್ಯಾ ರಾವ್ ಅವರೇ ₹102 ಕೋಟಿ ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಾಟ ಮಾಡಿದ ಆರೋಪ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ : ರಾಜ್ಯ ಕಬ್ಬು ಬೆಳೆಗಾರರ ಹೋರಾಟ: ತುರ್ತು ಭೇಟಿಗೆ ಅವಕಾಶ ನೀಡುವಂತೆ ಪ್ರಧಾನಿಗೆ ಸಿಎಂ ಪತ್ರ

ಇನ್ನುಳಿದ ನಾಲ್ವರು ಆರೋಪಿಗಳಿಗೂ ಪ್ರತ್ಯೇಕ ನೋಟಿಸ್
ಇನ್ನುಳಿದ ನಾಲ್ವರು ಆರೋಪಿಗಳಿಗೂ ಪ್ರತ್ಯೇಕ ನೋಟಿಸ್ ನೀಡಲಾಗಿದೆ. ತನಿಖೆಯ ವೇಳೆಯಲ್ಲಿ ರನ್ಯಾ ರಾವ್ ಅವರ ತಂದೆ ರಾಮಚಂದ್ರ ರಾವ್ ಅವರ ಕಾರಿನ ದುರ್ಬಳಕೆ, ಜೊತೆಗೆ ರಾಜಕಾರಣಿಗಳ ಹೆಸರಿನ ದುರುಪಯೋಗ ಸೇರಿದಂತೆ ಹಲವು ಅಂಶಗಳು ಬಹಿರಂಗವಾಗಿವೆ.
ಇನ್ನು ಈಗ ಪ್ರಕರಣ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

ಇದನ್ನು ನೋಡಿ : ರನ್ಯಾ ರಾವ್ ಕೇಸ್ | 123 ಕೋಟಿಯ ಗೋಲ್ಡ್ ಸ್ಮಗ್ಲಿಂಗ್ ಸಾಬೀತು – ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ




