Suicide : ಬಿಜೆಪಿ ನಾಯಕ ಡಾ.ಸಿ.ಎನ್.ಅಶ್ವತ್ಥ್ನಾರಾಯಣ್ ಅವರ ಆಪ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಜೆಪಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ನಾರಾಯಣ್ ( C.N. Ashwath Narayan) ಅವರ ಆಪ್ತ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ವೆಂಕಟೇಶ್ (45) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ವೈಯ್ಯಾಲಿಕಾವಲ್ನಲ್ಲಿರುವ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
“ಯಾರೂ ಚೀಟಿ ಏಜೆಂಟ್ ಆಗಬೇಡಿ”
ಅಶ್ವತ್ಥ್ನಾರಾಯಣ್ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ವೆಂಕಟೇಶ್, ಸಾವಿನ ಮೊದಲು ಒಂದು Video ಮಾಡಿದ್ದಾರೆ. ಆ ವಿಡಿಯೋದಲ್ಲಿ ಅವರು “ಯಾರೂ ಚೀಟಿ ಏಜೆಂಟ್ ಆಗಬೇಡಿ” ಎಂದು ಹೇಳಿದ್ದಾರೆ.
ಇದನ್ನು ಓದಿ : BBK 12 : ಸ್ನೇಹದ ವಿಚಾರಕ್ಕೆ ಫಸ್ಟ್ ಟೈಮ್ Emotional ಆದ ಗಿಲ್ಲಿ, ಕಾವ್ಯ
ವಿಡಿಯೋದಲ್ಲಿ ಏನ್ ಹೇಳಿದ್ದಾರೆ..?
“ಯಾರೂ ಚೀಟಿ ವ್ಯವಹಾರ ಮಾಡಬೇಡಿ. ಚೀಟಿಯಿಂದ ಆಗುವ ತೊಂದರೆಗಳು ಅಷ್ಟಿಷ್ಟಲ್ಲ. ನಾನು ಚೀಟಿ ಏಜೆಂಟ್ ಆಗಿದ್ದೇನೆ. ನಾನು ಕಷ್ಟಕ್ಕೆ ಸಿಲುಕಿದ್ದೇನೆ. ಚೀಟಿ ಹಣದಲ್ಲಿ ಯಾರೋ ಕೈ ಎತ್ತಿದ್ರೆ, ಏಜೆಂಟರನ್ನ ಹಿಡಿದುಕೊಳ್ಳುತ್ತಾರೆ. ನಾನೀಗ ಅಂತಹದ್ದೇ ಪರಿಸ್ಥಿತಿಗೆ ಸಿಲುಕಿದ್ದೇನೆ.”
ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು
ಮೂರು ದಿನಗಳ ಹಿಂದೆಯೇ ಅವರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಘಟನೆ ಇಂದು ಬೆಳಕಿಗೆ ಬಂದಿದೆ. ವೆಂಕಟೇಶ್ ಅವರು ಕಳೆದ ಸೋಮವಾರ ಸಂಜೆ ಸಾವಿಗೆ ಶರಣಾಗಿದ್ದು, ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಇನ್ನು ಪೊಲೀಸರು ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರ್ಥಿಕ ಒತ್ತಡವೇ ವೆಂಕಟೇಶ್ ಅವರ ಆತ್ಮಹತ್ಯೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ಇದನ್ನು ನೋಡಿ : ತುಮಕೂರಿಗರೇ ಹುಷಾರ್.. ಹುಷಾರ್ ಸಾವಿಗಾಗಿ ಕಾದಿವೆ ವಿದ್ಯುತ್ ಪೆಟ್ಟಿಗೆಗಳು




