BBK : ಇಷ್ಟುದಿನ ಸ್ನೇಹ, ಪ್ರೀತಿ, ತರ್ಲೆ, ತುಂಟಾಟ ಅಂತಾ ಕಿತ್ತಾಡ್ತಿದ್ದ ಗಿಲ್ಲ- ಕಾವ್ಯ ಜೋಡಿ, ಮೊದಲ ಬಾರಿಗೆ ಭಾವನೆಗೆ ಒಳಗಾದಂತೆ ಕಾಣ್ತಿದೆ.

ಬಿಗ್ ಬಾಸ್ (BIgg Boss 12) ಮನೆಯಲ್ಲಿ ದಿನಗಳು ಕಳೆದಂತೆ ಸ್ಪರ್ಧಿಗಳ ನಡುವೆ ಹೊಸ ಹೊಸ ಬಾಂಧವ್ಯಗಳು ಮೂಡುತ್ತಿವೆ. ಇಷ್ಟುದಿನ “ಸ್ನೇಹ, ತರ್ಲೆ, ತುಂಟಾಟ” ಅಷ್ಟೇ ಇದ್ದ Kavya ಮತ್ತು Gilli ನಡುವಿನ ಸಂಬಂಧ ಈಗ ಮತ್ತೊಂದು ಹಂತ ತಲುಪಿದಂತೆ ಕಾಣ್ತಿದೆ.
ಇಂದು ರಾತ್ರಿಯ ಪ್ರೊಮೋ ಬಿಡುಗಡೆ
Colors kannada ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯ Promo ಬಿಡುಗಡೆ ಮಾಡಿಕೊಂಡಿದ್ದು, ಅದರಲ್ಲಿ ಕಾವ್ಯ ಮತ್ತು ಗಿಲ್ಲಿ ಇಬ್ಬರೂ ತಮ್ಮ ಮನದ ಮಾತು ಹಂಚಿಕೊಂಡಿರುವ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿವೆ.

ಇದನ್ನು ಓದಿ : Gadag: ಬೆತ್ತಲೆಗೊಳಿಸಿ ಕೈ–ಕಾಲು ಕಟ್ಟಿದ ಸ್ಥಿತಿಯಲ್ಲಿ ಕೃಷಿ ಹೊಂಡದಲ್ಲಿ ಅನಾಮಧೇಯನ ಶವ ಪತ್ತೆ ..!
ಇಬ್ಬರ ನಡುವಿನ ಸಂಭಾಷಣೆ ಹೀಗಿದೆ
ಕಾವ್ಯ: ಏನು ನಿನ್ನ ಪ್ರಾಬ್ಲಮ್ಮು, ಮಾತು ಬಿಟ್ಟಿದ್ದು ಯಾರು?
ಕಾವ್ಯ: ನೀನು ಇನ್ಮೇಲೆ ನನ್ನ ಕಾವು, ಕಾವು ಅಂತಾ ರೇಗಿಸಲೇಬೇಡ.
ಗಿಲ್ಲಿ: ಆಯ್ತು, ಮಾತೇ ಆಡಲ್ಲ ಬಿಡು..
ಕಾವ್ಯ: ನಿನ್ನ ಸ್ವಾಭಿಮಾನಕ್ಕೆ ದಕ್ಕೆ ಆಗುವ ರೀತಿ ಏನು ಮಾಡಿದ್ದೀನಿ?
ಗಿಲ್ಲಿ: ನಾನು ನಿನ್ನ ರೇಗಿಸಬಾರದು ಅಲ್ವಾ..? ಮಾತಾಡಿಸಿದ್ರೆನೇ ಅದೆಲ್ಲ ಪ್ರಾಬ್ಲಮ್ಮು.. ಮಾತೇ ಆಡಿಲ್ಲ ಅಂದಬಿಟ್ರೆ,
ಕಾವ್ಯ: ಅವರೆಲ್ಲ ಹೇಳಿದಾಗ ನಿನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಿಲ್ಲ.
ಗಿಲ್ಲಿ: ಊರವರೆಲ್ಲ ಬಯ್ಯೋದಕ್ಕೂ, ಮನೆಯವರು ಬಯ್ಯೋದ್ಕೂ ಒಂದು ಇರುತ್ತದೆ ಗೊತ್ತಾ..? ತಿರುಗಾ ಕೇಳ್ತೀನಿ, ಲಾಸ್ಟ್..
ಕಾವ್ಯ: ಸರಿ, ಮಾತಾಡಿಸು, ರೇಗಿಸಬೇಡ
ಗಿಲ್ಲಿ: ಹಾಗಿದ್ದರೆ ಮಾತಾಡಿಸಲ್ಲ.
ಬಿಗ್ ಬಾಸ್ ಮನೆಯಲ್ಲಿ ಈ ಇಬ್ಬರ ಸ್ನೇಹ ದಿನೇದಿನೇ ಬಲವಾಗುತ್ತಿದ್ದು, ಈಗ ಪ್ರೇಮದ ಅಂಗಳಕ್ಕೆ ಕಾಲಿಡ್ತಿದೆಯೇ ಎನ್ನುವ ಪ್ರಶ್ನೆ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿದೆ. Social Media ಗಳಲ್ಲಿ ಕೂಡಾ #KavyaGilli Trend ಆಗುತ್ತಿದೆ.

ಇವರಿಬ್ಬರ ನಡುವಿನ ಹೊಸ ಬಾಂಧವ್ಯ ಮುಂದಿನ ಸಂಚಿಕೆಯಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಹೆಚ್ಚಿದೆ.
ಇದನ್ನು ನೋಡಿ : ಡೆಲ್ಲಿ ಅಂಗಳಕ್ಕೆ ಪವರ್ ಶೇರಿಂಗ್ ಆಟ.. ಮತ್ತೆ ಸಿಎಂ ದೆಹಲಿ ದಂಡಯಾತ್ರೆ




