Sira: ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯ ದೊಡ್ಡಬಾಣಗೆರೆಯಲ್ಲಿ 86 ವರ್ಷದ ಮಹಿಳೆಯೊಬ್ಬರನ್ನು ಕೊಲೆ ಮಾಡಿ 53 ಗ್ರಾಂ ಚಿನ್ನದ ಸರ ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Sira: ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬಾಣಗೆರೆ ಗ್ರಾಮದಲ್ಲಿ ನಡೆದ ವಯಸ್ಸಾದ ಮಹಿಳೆಯ ಕೊಲೆ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಚಿನ್ನಕ್ಕಾಗಿ 86 ವರ್ಷದ ಅಜ್ಜಿಯ ಕೊಲೆ
ದೊಡ್ಡಬಾಣಗೆರೆ ಗ್ರಾಮದ ನಿವಾಸಿ ಪುಟ್ಟೀರಮ್ಮ (86) ಎಂಬುವರು ಕೊಲೆಯಾದ ಮಹಿಳೆ. ಪುಟ್ಟೀರಮ್ಮ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಅದೇ ಗ್ರಾಮದ ಶ್ರೀಧರ್ ಎಂಬಾತ ಬಂದು ಬಟ್ಟೆಯ ಹಗ್ಗದಿಂದ ಕುತ್ತಿಗೆ ಬಿಗಿದು ಕೆಳಗೆ ಬೀಳಿಸಿ, ನಂತರ ಟವೆಲ್ನಿಂದ ಮುಖ ಒತ್ತಿ ಕೊಲೆಮಾಡಿದ್ದ.
ಆರೋಪಿ ಶ್ರೀಧರ್ ಬಂಧನ
ಪುಟ್ಟೀರಮ್ಮ ಅವರ ಕೊರಳಿನಲ್ಲಿದ್ದ 53 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಘಟನೆಯ ಬಳಿಕ ಪುಟ್ಟೀರಮ್ಮ ಅವರ ಪುತ್ರ ವೀರಣ್ಣ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪಟ್ಟನಾಯಕನಹಳ್ಳಿ ಪೊಲೀಸರು ಶಿರಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಶ್ರೀಧರ್ ದುಶ್ಚಟ ಹಾಗೂ ಹಣದ ಆಸೆಯಿಂದ ಕೃತ್ಯ
ಆರೋಪಿಯು ಚಿನ್ನದ ಸರವನ್ನು ಬೆಂಗಳೂರು ಬಾಗಲುಗುಂಟೆಯ ಖಾಸಗಿ ಬ್ಯಾಂಕ್ನಲ್ಲಿ ₹2 ಲಕ್ಷಕ್ಕೆ ಗಿರವಿ ಇಟ್ಟು, ಆ ಹಣದಿಂದ ಮೊಬೈಲ್ ಫೋನ್, ಬಟ್ಟೆ ಸೇರಿದಂತೆ ಅನಾವಶ್ಯಕ ವೆಚ್ಚ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Sira: ರಸ್ತೆ ಬದಿಯ ಪೊದೆಯಲ್ಲಿ ಯುವಕನ ಶವ ಪತ್ತೆ..!
ಆರೋಪಿಯಿಂದ ₹6 ಲಕ್ಷ ಮೌಲ್ಯದ ಚಿನ್ನ ಮತ್ತು 2 ಮೊಬೈಲ್ ವಶ
ಪೊಲೀಸರು ಒತ್ತೆ ಇಟ್ಟಿದ್ದ ₹6 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಶ್ರೀಧರ್ ಮದ್ಯಪಾನ, ಜೂಜಾಟದ ದುಶ್ಚಟಗಳಲ್ಲಿ ಮುಳುಗಿದ್ದ ಹಾಗು ಹಣದ ದುರಾಸೆಯಿಂದಲೇ ಕೊಲೆಗೈದಿದ್ದಾನೆ.
ಹಲವು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲು
ಆರೋಪಿಯು ಬೆಂಗಳೂರಿನ ಮಡಿವಾಳ ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನ, ಸುಲಿಗೆ ಮತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
MUST WATCH: SIRA | ಪೊದೆಯಲ್ಲಿ ವ್ಯಕ್ತಿಯ ಮೃ*ದೇಹ ಪತ್ತೆ ಕೊಳೆತ ಶ* ಕಂಡು ಬೆಚ್ಚಿ ಬಿದ್ದ ಜನರು




