Karnataka Politics : ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕುರಿತ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Karnataka Politics : ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕುರಿತ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಾತನಾಡಿದ ಅವರು, “ಪ್ರಸ್ತುತ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿದರೆ ಒಳ್ಳೆಯದು” ಎಂದು ಹೇಳಿದರು.
ಡಿಕೆ ಶಿವಕುಮಾರ್ ವರದಿಗಳಿಗೆ ಯತ್ನಾಳ್ ಪ್ರತಿಕ್ರಿಯೆ
ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, “ಸಿದ್ದರಾಮಯ್ಯ ಅವರ ಮೌನ ಮತ್ತು ಉದ್ದೇಶಗಳಲ್ಲಿ ಸ್ಪಷ್ಟತೆ ಇಲ್ಲ. ಸಿಎಂ ರಾಜಣ್ಣ ನಿವಾಸಕ್ಕೆ ಭೇಟಿ ನೀಡಿದ್ದು, ರಾಜಣ್ಣ ಬಣ ಡಿಕೆಶಿ ವಿರುದ್ಧ ಆರೋಪ ಮಾಡುತ್ತಿದೆ. ಕಾಂಗ್ರೆಸ್ನೊಳಗೆ ಗೊಂದಲ ಸ್ಪಷ್ಟವಾಗಿದೆ; ಪಕ್ಷ ವಿಭಜನೆಯ ಆತಂಕವಿದೆ,” ಎಂದರು.
ಇದನ್ನು ಓದಿ : Bengaluru : ಹೆಂಡತಿಯಿಂದ ಕಿರುಕುಳ ಆರೋಪ – ಬ್ಯಾಂಕ್ ಉದ್ಯೋಗಿ ಸೂಸೈಡ್
ಪರಪ್ಪನ ಅಗ್ರಹಾರ ವಿವಾದದ ಮೇಲೆ ಕಿಡಿ
ಜೈಲು ನಿರ್ವಹಣೆ ಬಗ್ಗೆ ಮಾತನಾಡಿದ ಯತ್ನಾಳ್, “ಯಾವ ಸರ್ಕಾರವೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿಲ್ಲ. ಜೈಲುಗಳು ಈಗ ಭಯೋತ್ಪಾದಕರ ಆಶ್ರಯ ತಾಣಗಳಾಗಿವೆ. ಕೈದಿಗಳು ಮೊಬೈಲ್ ಬಳಸುತ್ತಿರುವುದು ಗಂಭೀರ ವಿಷಯ. ಸಮಗ್ರ ತನಿಖೆ ಅಗತ್ಯ,” ಎಂದು ಹೇಳಿದರು.

ರೈತರ ಹೋರಾಟದ ಬೆಂಬಲ
ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಯತ್ನಾಳ್ ಸರ್ಕಾರದ ವಿರುದ್ಧ ಕಿಡಿಕಾರಿದರು. “ಸರ್ಕಾರ ರೈತರನ್ನು ವಂಚಿಸಿದೆ, ಭ್ರಷ್ಟಾಚಾರದಲ್ಲಿ ಮುಳುಗಿದೆ. 2018ರಿಂದ ಬಾಕಿ ಪಾವತಿಗಳು ಇನ್ನೂ ಕೊಡಲಾಗಿಲ್ಲ,” ಎಂದು ಟೀಕಿಸಿದರು.
ಯತ್ನಾಳ್ ಮುಂದಿನ ಸಿಎಂ?
ಈ ನಡುವೆ ಗದಗಕ್ಕೆ ಭೇಟಿ ನೀಡಿದ ಯತ್ನಾಳ್ ಅವರನ್ನು ಬೆಂಬಲಿಸಿದವರಿಂದ “ಮುಂದಿನ ಸಿಎಂ ಯತ್ನಾಳ್” ಎಂಬ ಘೋಷಣೆಗಳು ಕೇಳಿಬಂದವು. ಸಭಿಕರು ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನು ನೋಡಿ : ಬಾಂಗ್ಲಾದೇಶ್ ತಂಡದ ಮಾಜಿ ನಾಯಕನಿಗೆ ಹೃದಯಾಘಾತ!




