Bengaluru: ವಿಧಾನಸೌಧದಲ್ಲೇ ಭಯೋತ್ಪಾದಕರನ್ನು ಇಟ್ಟುಕೊಂಡಿದ್ದಾರೆ. ಹಾಗಿದ್ದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕರ ಬಗ್ಗೆ ಮಾತನಾಡಿ ಏನು ಪ್ರಯೋಜನ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Bengaluru: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯಗಳು ಮತ್ತು ರಾಜಾತಿಥ್ಯ ದೊರಕುತ್ತಿರುವ ಘಟನೆ ರಾಜ್ಯದ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಜೈಲು ವಿವಾದದ ಮೇಲೆ ಕುಮಾರಸ್ವಾಮಿ ತೀವ್ರ ವಾಗ್ದಾಳಿ
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ವಿಧಾನಸೌಧದಲ್ಲೇ ಭಯೋತ್ಪಾದಕರನ್ನು ಇಟ್ಟುಕೊಂಡಿದ್ದಾರೆ. ಹಾಗಿದ್ದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕರ ಬಗ್ಗೆ ಮಾತನಾಡುವುದರಿಂದ ಏನು ಪ್ರಯೋಜನ?” ಎಂದು ಕಿಡಿಕಾರಿದ್ದಾರೆ.
“ತನಿಖೆ ಮಾಡ್ತೀನಿ ಅಂದ್ರೆ ನಾಟಕ” – ಕುಮಾರಸ್ವಾಮಿ ಟೀಕೆ
ಇನ್ನು “ಜೈಲಿನಲ್ಲಿ ಏನ್ ನಡೆಯುತ್ತಿದೆ ಅನ್ನೋದರ ಸತ್ಯಾಸತ್ಯತೆ ಈಗಾಗಲೇ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ. ಖೈದಿಗಳಿಗೆ ನೀಡಿರುವ ಸೌಲಭ್ಯಗಳ ವಿಡಿಯೋಗಳು ಜನರ ಮುಂದೇ ಬಂದಿವೆ. ಹೀಗಿರುವಾಗ ಮತ್ತೆ ತನಿಖೆ ಮಾಡ್ತೀನಿ ಅಂದ್ರೆ ಅದರಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕೈದಿಗಳಿಗೆ ಐಷಾರಾಮಿ ವ್ಯವಸ್ಥೆ ಆರೋಪ, ಗೃಹಸಚಿವ–ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹ
ಜೈಲು ಸೌಲಭ್ಯ ವಿವಾದ – “ಸರ್ಕಾರವೇ ಹೊಣೆಗಾರ” ಎಂದ ಕುಮಾರಸ್ವಾಮಿ
“ರಾಜ್ಯ ಸರ್ಕಾರದ ವೈಫಲ್ಯ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಸಿಎಂ ಹಾಗೂ ಗೃಹ ಸಚಿವರು ಏಕೆ ಕ್ರಮ ಕೈಗೊಂಡಿಲ್ಲ? ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಇಂಥ ಘಟನೆ ಸಂಭವಿಸಿರಲಿಲ್ಲ” ಎಂದು ಟೀಕಿಸಿದರು.
“ಸಿಎಂಗೆ ಇಂಟೆಲಿಜೆನ್ಸ್ ಇಲ್ಲವಾ?” – ಕುಮಾರಸ್ವಾಮಿ ಪ್ರಶ್ನೆ
“ಸಿಎಂ ಅವರು ಬಿಜೆಪಿಗೆ ಮಾನ ಇಲ್ಲ ಎಂದು ಹೇಳುತ್ತಾರೆ, ಆದರೆ ರಾಜ್ಯದ ಸಿಎಂ ಆಗಿರುವ ನಿಮ್ಮ ಅನುಭವವೇನು? ಇಷ್ಟು ದೊಡ್ಡ ಘಟನೆ ನಡೆದರೂ ‘ನನಗೆ ಗೊತ್ತಿಲ್ಲ, ತನಿಖೆ ಮಾಡ್ತೀನಿ’ ಅಂದ್ರೆ, ಸಿಎಂಗೆ ಇಂಟೆಲಿಜೆನ್ಸ್ ಇಲಾಖೆಯೇ ಇಲ್ಲವೆ?” ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ಮತ್ತು ಗೃಹ ಸಚಿವರ ವಿರುದ್ಧ ಕುಮಾರಸ್ವಾಮಿ ಕಿಡಿ
“ಈ ರೀತಿಯಾಗಿ ಲಘುವಾಗಿ ಮಾತನಾಡಿ ಕಾಲಹರಣ ಮಾಡುವ ಬದಲಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರಿಗೆ ಸರ್ಕಾರವೇ ಈ ಎಲ್ಲಕ್ಕಿಂತ ಹೊಣೆ ಎನ್ನುವ ಭಾವನೆ ಮೂಡುತ್ತಿದೆ” ಎಂದು ಹೇಳಿದ್ದಾರೆ.
MUST WATCH: KUMAR SWAMY | ಅದೇನು ಕಣ್ಣೀರೋ, ಆನಂದಬಾಷ್ಪವೋ. ಡಿಕೆಶಿ ಕಣ್ಣೀರಿಗೆ ಹೆಚ್ಡಿಕೆ ವ್ಯಂಗ್ಯ




