Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B. Y. Vijayendra) ಆಗ್ರಹಿಸಿದ್ದಾರೆ.

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯವನ್ನು ಕಲ್ಪಿಸಿರುವ ಹಿನ್ನೆಲೆ ಬೆಂಗಳೂರು ಯುವ ಮೋರ್ಚಾ (Bharatiya Janata Yuva Morcha) ನೇತೃತ್ವದಲ್ಲಿ ರೇಸ್ ಕೋರ್ಸ್ ನಲ್ಲಿ ಪ್ರತಿಭಟನೆ ನಡೆಸಿದರು.
ಪರಪ್ಪನ ಅಗ್ರಹಾರ ಜೈಲು ಕೈದಿಗಳಿಗೆ ಐಷಾರಾಮಿ ವ್ಯವಸ್ಥೆ- ಯುವ ಮೋರ್ಚಾ ಪ್ರತಿಭಟನೆ
ಜೈಲು ಒಂದು ರೀತಿಯ ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದ್ದು, ಭಯೋತ್ಪಾದಕರು, ಐಎಸ್ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳಿಗೆ ಟಿವಿ, ಮೊಬೈಲ್ ಫೋನ್ ಮತ್ತು ಗುಂಡು–ತುಂಡುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು.
CM–ಗೃಹ ಸಚಿವರೇ ಪರಪ್ಪನ ಅಗ್ರಹಾರ ಜೈಲು ವಿವಾದಕ್ಕೆ ಹೊಣೆಗಾರರು
ಇನ್ನು ಈ ಪ್ರಕಾರದ ಐಷಾರಾಮಿ ವ್ಯವಸ್ಥೆಗಳಿಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರೇ ಹೊಣೆಗಾರರು ಎಂದರು. ಅಲ್ದೇ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ಜೈಲಿನ ಬಗ್ಗೆ ಸಮಾಹಿತಿ ಬಂದ ನಂತರ ದಾಳಿ ನಡೆದಿದೆ ಎಂದರು.
ಇದನ್ನೂ ಓದಿ: BJP Core Committee Meeting : ಬೆಂಗಳೂರಿನಲ್ಲಿ ಇಂದು ಸಂಜೆ BJP ಕೋರ್ ಕಮಿಟಿ ಸಭೆ
ಜೈಲು ವ್ಯವಸ್ಥೆ ಮತ್ತು ಭ್ರಷ್ಟಾಚಾರ ಕುರಿತು ಬಿಜೆಪಿ ಹೋರಾಟ
“ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜೈಲಿನ ವ್ಯವಸ್ಥೆ ಸಹ ಭ್ರಷ್ಟಾಚಾರದಿಂದ ಮುಳುಗಿಹೋಗಿದೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ನೀಡಲಾಗಿರುವ ಸೌಲಭ್ಯಗಳು ದೇಶದ್ರೋಹದ ಕೆಲಸವಾಗಿದೆ. ಸುಮ್ಮನೆ ನಾಟಕ ಮಾಡಿ ತಿಪ್ಪೆ ಸಾರಬಾರದು.”
ಬಿಜೆಪಿ ನಾಯಕರು ಗೃಹಮಂತ್ರಿಗಳ ರಾಜೀನಾಮೆಗೆ ಒತ್ತಾಯ
ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬಿ.ವೈ. ವಿಜಯೇಂದ್ರ, ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಸಿ.ಟಿ ರವಿ, ಶ್ರೀ ಕೆ ಗೋಪಾಲಯ್ಯ, ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ನಾರಾಯಣಸ್ವಾಮಿ, ಶಾಸಕರು ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ರು.
MUST WATCH: Home Minister ಮನೆ ಮುಂದೆ ಪ್ರತಿಭಟನೆಗೆ ಯತ್ನ- BJP ಕಾರ್ಯಕರ್ತರು ವಶಕ್ಕೆ




