Suicide : ಪತ್ನಿಯಿಂದ ಕಿರಕುಳ ತಾಳಲಾರದೇ ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Suicide : ಪತ್ನಿಯಿಂದ ಕಿರಕುಳ ತಾಳಲಾರದೇ ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಮೃತನನ್ನು ಗಗನ್ ರಾವ್ (Gagan Rao) ಎಂದು ಗುರುತಿಸಲಾಗಿದೆ.
8 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ
ಗಗನ್ ರಾವ್ ಎಂಟು ತಿಂಗಳ ಹಿಂದೆ ಮೇಘನಾ ಜಾವ್ ಅವರೊಂದಿಗೆ ವಿವಾಹವಾಗಿದ್ದರು. ಗಗನ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದು, ಆತ್ಮಹತ್ಯೆಗೆ ಮುನ್ನ ಪತ್ನಿಯ ಕಿರುಕುಳ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನು ಓದಿ : Raichur : KKRTC ಸ್ಲೀಪರ್ ಕೋಚ್ ಬಸ್ ಪಲ್ಟಿ -15 ಜನ ಪ್ರಯಾಣಿಕರಿಗೆ ಗಾಯ

ಪತ್ನಿಯ ಅನುಮಾನವೇ ಆತ್ಮಹತ್ಯೆಗೆ ಕಾರಣ?
ಮಾಹಿತಿಯ ಪ್ರಕಾರ, ಮೇಘನಾ ತನ್ನ ಪತಿ ಗಗನ್ ಮೇಲೆ ನಿರಂತರ ಅನುಮಾನ ಪಡುತ್ತಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಜಗಳವಾಗುತ್ತಿತ್ತು. ಬಳಿಕ ಕೋಪಗೊಂಡ ಮೇಘನಾ ತವರಿಗೆ ಹೋಗಿದ್ದಳು,
ಆದರೆ ಇತ್ತೀಚೆಗಷ್ಟೇ ಗಗನ್ನ ಮನೆಗೆ ವಾಪಸ್ಸು ಬಂದಿದ್ದಳು. ನಿನ್ನೆ ರಾತ್ರಿ ದಂಪತಿಯ ನಡುವೆ ಮತ್ತೊಮ್ಮೆ ಗಲಾಟೆ ನಡೆದಿದೆ. ಈ ಘಟನೆ ಬಳಿಕ ಬೇಸತ್ತ ಗಗನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತನ ಕುಟುಂಬದಿಂದ ಗಂಭೀರ ಆರೋಪ
ಇನ್ನು ಗಗನ್ ಕುಟುಂಬದವರು ಮೇಘನಾ ವಿರುದ್ಧ ಮಾಟಮಂತ್ರ ಮಾಡಿ ಕಿರುಕುಳ ನೀಡಿದ್ದಾಳೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಬಿಜೆಪಿಯ ಜೊಲ್ಲೆಗೆ ನೀಡಿದ್ದೇಕೆ? ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ ಹೇಳಿದ್ದೇನು?




