IPL 2026 Auction : ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗಾಗಿ ದಿನಾಂಕ ನಿಗದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19ರ ಮಿನಿ ಹರಾಜಿನ ದಿನಾಂಕವನ್ನು ನಿಗದಿಪಡಿಸಲಾಗಿದೆ. BCCI ಮೂಲಗಳ ಪ್ರಕಾರ, ಡಿಸೆಂಬರ್ 15, 2025 ರಂದು ಮಿನಿ ಹರಾಜು ನಡೆಯಲಿದೆ. ಆದರೆ, ಈ ಬಾರಿ ಹರಾಜು ನಡೆಯುವ ಸ್ಥಳವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಹಿಂದಿನ ಬಾರಿ ಸೌದಿ ಅರೇಬಿಯಾದಲ್ಲಿ ಮೆಗಾ ಹರಾಜು
ಕಳೆದ ವರ್ಷ ನಡೆದ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಆಯೋಜಿಸಲಾಗಿತ್ತು. 2 ದಿನಗಳ ಕಾಲ ನಡೆದ ಆ ಹರಾಜು ಒಂದು ಭರ್ಜರಿ ಈವೆಂಟ್ ಆಗಿತ್ತು. ಆದರೆ ಈ ಬಾರಿ ಮಿನಿ ಹರಾಜಾಗಿರುವುದರಿಂದ, ಒಂದು ದಿನದಲ್ಲೇ ಆಕ್ಷನ್ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಲಾಗಿದೆ.
ರಿಟೈನ್ ಪಟ್ಟಿ ಸಲ್ಲಿಸಲು ನವೆಂಬರ್ 15 ಅಂತಿಮ ದಿನಾಂಕ
ಎಲ್ಲಾ ಫ್ರಾಂಚೈಸಿಗಳಿಗೆ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ (Retain) ಆಟಗಾರರ ಪಟ್ಟಿಯನ್ನು ನವೆಂಬರ್ 15ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.
ಅದೇ ದಿನ 10 ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಅಧಿಕೃತವಾಗಿ ಪ್ರಕಟವಾಗಲಿದೆ.
ಇದನ್ನು ಓದಿ : BBK 12 : ರಾಶಿಕಾ ಬಗ್ಗೆ ಕೇವಲವಾಗಿ ಮಾತಾಡಿಬಿಟ್ರಾ ಧ್ರುವಂತ್..?

ಕೆಲವು ಸ್ಥಾನಗಳಿಗೆ ಮಾತ್ರ ಹರಾಜು
ಉದಾಹರಣೆಗೆ, 10 ಫ್ರಾಂಚೈಸಿಗಳು ಒಟ್ಟು 200 ಆಟಗಾರರನ್ನು ರಿಟೈನ್ ಮಾಡಿದರೆ, ಉಳಿದ 50 ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಇದರಿಂದ ಈ ಬಾರಿ ಹರಾಜು ಪ್ರಕ್ರಿಯೆ ಕಡಿಮೆ ಅವಧಿಯಲ್ಲೇ ಪೂರ್ಣಗೊಳ್ಳಲಿದೆ.
ಆಟಗಾರರ ನೋಂದಣಿ ಮತ್ತು ಶಾರ್ಟ್ಲಿಸ್ಟ್ ಪ್ರಕ್ರಿಯೆ
ಹರಾಜಿಗೆ ಮುನ್ನ ಆಟಗಾರರ ಹೆಸರು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅದರ ಬಳಿಕ ಬಿಸಿಸಿಐ ಆಯ್ಕೆ ಸಮಿತಿ ಶಾರ್ಟ್ಲಿಸ್ಟ್ ಸಿದ್ಧಪಡಿಸಿ, ಆ ಪಟ್ಟಿಯಲ್ಲಿರುವ ಆಟಗಾರರ ಹೆಸರುಗಳು ಮಾತ್ರ ಡಿಸೆಂಬರ್ 15ರ ಹರಾಜಿನಲ್ಲಿ ಕಾಣಿಸಲಿವೆ.
ಒಂದು ದಿನದ ಭರ್ಜರಿ ಕ್ರಿಕೆಟ್ ಆಕ್ಷನ್
ಡಿಸೆಂಬರ್ 15 ರಂದು ನಡೆಯಲಿರುವ IPL 2026 ಮಿನಿ ಹರಾಜು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ರೋಚಕ ಕ್ಷಣವಾಗಲಿದ್ದು, ಯಾವ ಆಟಗಾರರಿಗೆ ಹೆಚ್ಚು ಬೇಡಿಕೆ ಸಿಗುತ್ತದೆ ಎಂಬ ಕುತೂಹಲ ಈಗಾಗಲೇ ಶುರುವಾಗಿದೆ.

ಇದನ್ನು ನೋಡಿ : ಪೂರ್ಣಾವಧಿ ಸಿಎಂ ಎಂದ ಬಳಿಕ ಡಿಕೆ ಶಿವಕುಮಾರ್ ಮುಖ ನೋಡುತ್ತಲೇ ವರಸೆ ಬದಲಿಸಿದ ಸಿದ್ದರಾಮಯ್ಯ!




