BBK : ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ವೀಕೆಂಡ್ ಪಂಚಾಯ್ತಿಗೆ (Weekend Panchayti) ವೀಕ್ಷಕರು ಕಾದು ಕುಳಿತಿರುತ್ತಾರೆ.

ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ವೀಕೆಂಡ್ ಪಂಚಾಯ್ತಿಗೆ (Weekend Panchayti) ವೀಕ್ಷಕರು ಕಾದು ಕುಳಿತಿರುತ್ತಾರೆ. ಅಷ್ಟೇ ಅಲ್ಲ ಶುಕ್ರವಾರವೇ, ಸುದೀಪ್ (Sudeep) ಅವರು ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಲಿಸ್ಟ್ ಕೂಡ ಹಾಕಿಕೊಂಡಿರುತ್ತಾರೆ.
ಅಶ್ವಿನಿ ಗೌಡಗೆ ಕಿಚ್ಚನ ಗರಂ ಕ್ಲಾಸ್!
ವೀಕ್ಷಕರು ಬಯಸಿದಂತೆ ಕಿಚ್ಚ ಸುದೀಪ್ ಈ ಬಾರಿ ಅಶ್ವಿನಿ ಗೌಡ ಮೇಲೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಪ್ಪಲಿ ಮ್ಯಾಟರ್ ಕುರಿತಾಗಿ ಕಳೆದ ವಾರ ಕಿಚ್ಚ ಮಾತನಾಡಿರಲಿಲ್ಲ,
ಆದರೆ ಈ ವಾರ ವಿಷಯ ನೇರವಾಗಿ ಸುದೀಪ್ ಅವರ ಮುಂದೆಯೇ ಬಂದಿದೆ. ಅಸಲಿ ಸತ್ಯ ಏನು ಎಂಬುದು ರಿವೀಲ್ ಆಗಿದೆ.
ಅಶ್ವಿನಿ ವಿರುದ್ಧ ರಕ್ಷಿತಾ ಶೆಟ್ಟಿಗೆ ಆರೋಪ
ಬಿಗ್ ಬಾಸ್ ಆರಂಭದಿಂದಲೇ ಅಶ್ವಿನಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಅಸಮಾಧಾನ ನೆಲೆಸಿತ್ತು. ಅಶ್ವಿನಿ, ರಕ್ಷಿತಾಳನ್ನು “ಕಾರ್ಟೂನ್” ಎಂದು ಕರೆದಿದ್ದರು.
ಇದನ್ನು ಓದಿ : IND vs AUS : ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ
ಅಲ್ಲದೆ, ಬಟ್ಟೆ ಹಾಗೂ ಕೆಲವು ಪದಪ್ರಯೋಗಗಳ ಮೂಲಕ ವಿವಾದ ಉಂಟುಮಾಡಿದ್ದರು. ಇದೀಗ ಅವರು ಹೊಸ ಆರೋಪವನ್ನೂ ಮಾಡಿದ್ದಾರೆ. ರಕ್ಷಿತಾ ಕಲಾವಿದರಿಗೆ ಚಪ್ಪಲಿ ತೋರಿಸಿದ್ದಾರೆ ಎಂಬದು.
ರಕ್ಷಿತಾ ಅವರು ನಾಟಕ ಅಂತ ಹೇಳಿಕೊಂಡು ಚಪ್ಪಲಿ ತೋರಿಸ್ತಾರೆ
ʻರಕ್ಷಿತಾ ಅವರು ನಾಟಕ ಅಂತ ಹೇಳಿಕೊಂಡು ಚಪ್ಪಲಿ ತೋರಿಸ್ತಾರೆ. ನೀನು ಯಾರಿಗೆ ಅವಮಾನ ಮಾಡ್ತಾ ಇದ್ದೀಯಾ? ಅಂತ ನಾನು ಕೇಳಿದೆʼ ಎಂದು ಅಶ್ವಿನಿ ಗೌಡ ಕಿಚ್ಚನ ಮುಂದೆ ಹೇಳಿದರು.
ಅದಕ್ಕೆ ಕಿಚ್ಚ, ʻಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ಅಂತ ಕೇಳಿ, ಇಲ್ಲ ಎಂದು ಹೇಳಿದ್ದಾರೆ . ʻನಾವು ಗ್ರಹಿಕೆಯನ್ನ ತಪ್ಪಾಗಿ ಕೊಟ್ಟಾಗ ಏನಾಗತ್ತೆ, ಕಲಾವಿದರಿಗೆ ಹೇಳಿದ್ರಂತೆ ಅಂತೆಲ್ಲ ಆಗತ್ತೆ.
“ಕಲಾವಿದರಿಗೆ ನಾನು ಉತ್ತರ ಕೊಡಬೇಕಿತ್ತು!” – ಕಿಚ್ಚನ ಸ್ಪಷ್ಟನೆ
ಯಾಕೆ ಮೇಡಮ್? ಈ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಡ್ತಾ ಇರೋದು ನಾನು ಕೂಡ ಕಲಾವಿದನೇ ಅಲ್ವಾ? ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ಉತ್ತರ ಕೊಡಬೇಕಿತ್ತು. ಇದು ತಪ್ಪಾದ perception; ಅಂತ ಎಂದು ಕಿಚ್ಚ ನೇರವಾಗಿಯೇ ಹೇಳಿದ್ದಾರೆ. ಕಿಚ್ಚನ ಮಾಸ್ ಕ್ಲಾಸ್ಗೆ ಅಶ್ವಿನಿ ಗೌಡ ತಲೆ ತಗ್ಗಿಸಿದ್ದಾರೆ.
ಇದನ್ನು ನೋಡಿ : ವಯಸ್ಸಾಯ್ತು ಬಿಟ್ ಬಿಡಮ್ಮ ಅಂದ್ರೂ ಬಿಡಲಿಲ್ಲ ಈ ಮಹಾತಾಯಿ! ಈಕೆ ಮಾಡಿದ ಕೃತ್ಯ ಏನ್ ಗೊತ್ತಾ?




