Kudur Murder : 21ನೇ ಶತಮಾನ ಆಗಿದ್ರು ಕೂಡ ಇನ್ನು ದಲಿತರ ಮೇಲೆ ಆಗ್ತಿರೋ ದಬ್ಬಾಳಿಕೆ, ದೌರ್ಜನ್ಯ ಮಾತ್ರ ಕಡಿಮೆ ಆಗ್ತಿಲ್ಲ.

21ನೇ ಶತಮಾನ ಆಗಿದ್ರು ಕೂಡ ಇನ್ನು ದಲಿತರ ಮೇಲೆ ಆಗ್ತಿರೋ ದಬ್ಬಾಳಿಕೆ, ದೌರ್ಜನ್ಯ ಮಾತ್ರ ಕಡಿಮೆ ಆಗ್ತಿಲ್ಲ. ಇದೀಗ ದಲಿತ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ,
ಇನ್ನು ಕೊಲೆ ಮಾಡಿದ್ದಲ್ಲದೇ ಚಿರತೆ ದಾಳಿ ಮಾಡಿದೆ ಎಂದು ಕಥೆ ಕಟ್ಟಿರೋ ಘಟನೆ ಮಾಗಡಿ ತಾಲೂಕಿನ ಕುದೂರಿನಲ್ಲಿ (Kudur) ಬೆಳಕಿಗೆ ಬಂದಿದೆ.
ಮಾಲೀಕನಿಂದಲೇ ದಲಿತ ವ್ಯಕ್ತಿ
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಚಿಕ್ಕ ಮುದಿಗೆರೆ ಗ್ರಾಮದಲ್ಲಿ ಸಿ.ಜಿ ರಾಮಚಂದ್ರಯ್ಯ (C.G Ramachandrayya) ಎಂಬುವವರ ಕೋಳಿಫಾರಂನಲ್ಲಿ ರವಿ ಕುಮಾರ್ ಎಂಬ 55 ವರ್ಷದ ದಲಿತ ವ್ಯಕ್ತಿ ಕೆಲಸ ಮಾಡುತ್ತಿದ್ದರು. ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಾ, ಹೆಂಡ್ತಿ ಹಾಗೂ ಮೂವರು ಗಂಡು ಮಕ್ಕಳ ಜೊತೆ ಕೋಳಿಫಾರಂನಲ್ಲಿ ವಾಸವಾಗಿದ್ರು.
ಒಂದು ವರ್ಷದಿಂದ ಕೆಲಸ ಮಾಡಿಕೊಂಡು ಇದ್ದ ರವಿಕುಮಾರ್ ಮೇಲೆ ಕೋಳಿಫಾರಂನನ್ನು ನೋಡಿಕೊಳ್ಳುತ್ತಿದ್ದ ಮುರಳೀಧರಯ್ಯ ಅದೇನ್ ಕೋಪ ಇತ್ತೋ ಗೊತ್ತಿಲ್ಲ.
ನಿನ್ನೆ ಬೆಳಗಿನ ಜಾವ ಕೋಳಿ ಫಾರಂನ ಮುರಳೀಧರಯ್ಯ, ರವಿಕುಮಾರ್ ಮೇಲೆ ಸಿಕ್ಕ ಸಿಕ್ಕದನ್ನು ತೆಗೆದುಕೊಂಡು ಬಲವಾಗಿ ಹೊಡೆದು, ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ದಲಿತ ಮುಖಂಡರು ಆರೋಪ ಮಾಡಿದ್ದಾರೆ. ಇತ್ತ ಬೆಳ್ಳಂ ಬೆಳಗ್ಗೆ ಹತ್ಯೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಇದನ್ನು ಓದಿ : Gold Price Today : ಚಿನ್ನದ ದರದಲ್ಲಿ ಯಥಾಸ್ಥಿತಿ – ಸ್ವರ್ಣಪ್ರಿಯರಿಗೆ ಕೊಂಚ ನಿರಾಳ
ಕೊಲೆ ಮಾಡಿ ಚಿರತೆ ದಾಳಿ ಎಂದು ಕಥೆ ಕಟ್ಟಿದ್ರಂತೆ
ಇನ್ನು ದಲಿತ ವ್ಯಕ್ತಿಯನ್ನು ಕೊಲೆ ಮಾಡಿದ ಮುರಳೀಧರ್ ಎಂಬಾತ ಇದು ಕೊಲೆ ಅಲ್ಲ, ಚಿರತೆ ದಾಳಿ ಮಾಡಿ ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ್ನಂತೆ.
ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಇದು ಚಿರತೆ ದಾಳಿ ಅಲ್ಲ, ಕೊಲೆ ಯಾರೋ ಹೊಡೆದು ಸಾಯಿಸಿದ್ದಾರೆ ಎಂದು ಹೇಳಿದ್ರು. ಆದ್ರೆ ಇದಕ್ಕೆ ಪೊಲೀಸರು ಇಲ್ಲ ಇದು ಚಿರತೆ ದಾಳಿ ಅಂತಾ ವಾದ ಮಾಡಿದ್ರಂತೆ.
ದಲಿತ ವ್ಯಕ್ತಿಯ ಹತ್ಯೆ ಖಂಡಿಸಿ ದಲಿತ ಸಂಘಟನೆ ಪ್ರೊಟೆಸ್ಟ್
ಇನ್ನು ದಲಿತ ವ್ಯಕ್ತಿಯ ಹತ್ಯೆ ಖಂಡಿಸಿ ದಲಿತ ಸೇನೆ ರಾಮ ವಿಲಾಸ್ ಸಂಘಟನೆಯ ತುಮಕೂರು ಜಿಲ್ಲಾಧ್ಯಕ್ಷರಾದ ಗುಳೂರು ಸಿದ್ದರಾಜು, ಮಾಗಡಿ ತಾಲೂಕು ಅಧ್ಯಕ್ಷರಾದ ನಾಗರಾಜ್, ದಲಿತ ಸಂಘಟನೆಯ ಹಲವು ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ಇನ್ನು ದಲಿತರ ಮೇಲೆ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು.
ಒಟ್ನಲ್ಲಿ ದಲಿತ ಮುಖಂಡನ ಬರ್ಬರ ಹತ್ಯೆಗೆ ಇಡೀ ಮಾಗಡಿ ತಾಲೂಕು ಅಕ್ಷರಶಃ ಬೆಚ್ಚಿಬಿದ್ದಿದ್ದು, ದಲಿತ ವ್ಯಕ್ತಿಗೆ ಪೊಲೀಸರು ನ್ಯಾಯ ಕೊಡಿಸುತ್ತಾರಾ ಎಂದು ಕಾದುನೋಡಬೇಕಿದೆ.

ಇದನ್ನು ನೋಡಿ : ರುಕ್ಮಿಣಿ ವಸಂತ್ ಹೆಸರಲ್ಲಿ ಮೋಸ; ಎಚ್ಚರಿಸಿದ ‘ಕಾಂತಾರ’ದ ಕನಕವತಿ




