Belagavi Farmers Protest : ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಬೆಂಬಲಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸುತ್ತಿರುವ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

Belagavi Farmers Protest : ಶಾಂತಿಯುತ ಪ್ರತಿಭಟನೆ ನಡುವೆ ಉದ್ವಿಗ್ನ ವಾತಾವರಣ
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಬೆಂಬಲಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸುತ್ತಿರುವ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ರೈತರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಪ್ರತೀಕ್ಷಿತವಾಗಿ ಕೆಲವು ಕಿಡಿಗೇಡಿಗಳು ಮಧ್ಯೆ ನುಸುಳಿ ಕಲ್ಲು ತೂರಾಟ ನಡೆಸಿದ್ದಾರೆ.
ಈ ಘಟನೆ ಸ್ಥಳದಲ್ಲಿ ಗಂಭೀರ ಉದ್ವಿಗ್ನತೆಗೆ ಕಾರಣವಾಯಿತು.
ಕಲ್ಲು ತೂರಾಟದಿಂದ ಅಧಿಕಾರಿಗಳಿಗೆ ಗಾಯ
ಕಲ್ಲು ತೂರಾಟದಲ್ಲಿ ಡಿವೈಎಸ್ಪಿ ಸಜ್ಜನ್ ಅವರ ಕೈ ಮುರಿದಿದ್ದು, ಚಿಕಿತ್ಸೆ ನಂತರ ಕೈಗೆ ಬ್ಯಾಂಡೇಜ್ ಹಾಕಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇದೇ ವೇಳೆ 6 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
KSRTC ಬಸ್ಗಳಿಗೆ ಭಾರೀ ಹಾನಿ
ಕಲ್ಲು ತೂರಾಟದಿಂದ: 4 KSRTC ಬಸ್ಗಳ ಗಾಜು ಪುಡಿ ಪುಡಿ , ಲಾರಿಗಳು ಹಾಗೂ ಇತರೆ ವಾಹನಗಳಿಗೂ ಹಾನಿ,KSRTC ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ.
ರೈತರ ಹೇಳಿಕೆ: “ನಾವು ಶಾಂತಿಯುತ, ಕಿಡಿಗೇಡಿಗಳು ಮಧ್ಯೆ ನುಸುಳಿದ್ದಾರೆ!”
ರೈತ ಮುಖಂಡರು ಹೇಳುವ ಪ್ರಕಾರ,ನಾವು ಶಾಂತಿಯುತವಾಗಿ ಧರಣಿ ಮಾಡುತ್ತಿದ್ದೇವೆ. ಕೆಲವು ಕಿಡಿಗೇಡಿಗಳು ನುಸುಳಿ ಕಲ್ಲು ತೂರಿದ್ದಾರೆ. ರೈತರ ಹೋರಾಟಕ್ಕೆ ದಿಕ್ಕು ತಪ್ಪಿಸಲು ಈ ಕೃತ್ಯ ನಡೆಸಲಾಗಿದೆ.”
ಈ ಹಿನ್ನೆಲೆಯಲ್ಲಿ,ಕಲ್ಲು ತೂರಿದವರು ರೈತರೆ? ಅಥವಾ ಹೊರಗಿನ ಕಿಡಿಗೇಡಿಗಳೆ? ಎಂಬ ಚರ್ಚೆಗಳು ಸ್ಥಳೀಯವಾಗಿ ಜೋರಾಗಿದೆ.
ಸ್ಥಳಕ್ಕೆ IGP ಮತ್ತು SP ಭೇಟಿ
ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಉತ್ತರ ವಲಯದ IGP ಚೇತನ್ ಸಿಂಗ್ ರಾಠೋಡ್ ಹಾಗೂ ಎಸ್ಪಿ ಭೀಮಾಶಂಕರ ಗುಳೇದ್ ಸ್ಥಳಕ್ಕೆ ಭೇಟಿ ನೀಡಿದರು.
ಅವರು ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿಯೊಂದಿಗೆ ಕಾರಿನೊಳಗೆ ಮಾತುಕತೆ ನಡೆಸಿ ಪರಿಸ್ಥಿತಿ ಶಾಂತಿಪೂರ್ಣವಾಗಿಸಲು ಪ್ರಯತ್ನಿಸಿದರು.
“ಲಾಠಿಚಾರ್ಜ್ ಮಾಡಿಲ್ಲ” ಎಂದು ಪೋಲಿಸ್ ಹೇಳಿಕೆ
ಎಸ್ಪಿ ಗುಳೇದ್ ನೀಡಿದ ಮಾಹಿತಿ:
- “ಲಾಠಿಚಾರ್ಜ್ ಮಾಡಲು ನಾವು ಸೂಚನೆ ನೀಡಿಲ್ಲ.”
- “ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ.”
- “ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ, Pune–Bengaluru ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.”
- “ಹಾನಿ ಪರಿಶೀಲನೆ ನಡೆಯುತ್ತಿದೆ, ಯಾವುದೇ ಕೇಸ್ ಇನ್ನೂ ದಾಖಲಾಗಿಲ್ಲ.”
ಮುಂಜಾಗ್ರತಾ ಕ್ರಮ: ಹೆಚ್ಚುವರಿ ಪೊಲೀಸ್ ನಿಯೋಜನೆ
ಹತ್ತರಗಿ ಟೋಲ್ ಬಳಿ ಉದ್ವಿಗ್ನ ಪರಿಸ್ಥಿತಿಯನ್ನು ಗಮನಿಸಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಸಧ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ವಾಹನ ಸಂಚಾರವೂ ಪುನರಾರಂಭವಾಗಿದೆ.




