CM SIDDARAMAIAH : ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತುಮಕೂರು ಪ್ರವಾಸ ರದ್ದುಗೊಳಿಸಿದ್ದಾರೆ.

CM SIDDARAMAIAH: ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ತುಮಕೂರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಕಬ್ಬು ದರ, ಪಾವತಿ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ರೈತರ ಆಕ್ರೋಶ ತಾರಕಕ್ಕೇರಿರುವುದರಿಂದ ವಿಧಾನಸೌಧದಲ್ಲಿ ಚರ್ಚೆ ನಡೆಯುತ್ತಿವೆ.
ಸಿಎಂ ಸಿದ್ದರಾಮಯ್ಯ ತುಮಕೂರಿನಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಬೇಕಿತ್ತು
ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್, ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತುಮಕೂರಿಗೆ ಸಿಎಂ ಆಗಮಿಸಬೇಕಿತ್ತು. ಆದರೆ ಬ್ಯಾಕ್ ಟು ಬ್ಯಾಕ್ ಮೀಟಿಂಗ್ ಇದ್ದರಿಂದ ಸಿದ್ದರಾಮಯ್ಯ ಅವರ ಪ್ರವಾಸ ರದ್ದು ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯ ಕಬ್ಬು ಬೆಳೆಗಾರರ ಹೋರಾಟ: ತುರ್ತು ಭೇಟಿಗೆ ಅವಕಾಶ ನೀಡುವಂತೆ ಪ್ರಧಾನಿಗೆ ಸಿಎಂ ಪತ್ರ
ವಿಧಾನಸೌಧದಲ್ಲಿ ಸರಣಿ ಸಭೆಗಳು
ರೈತರ ಬೇಡಿಕೆಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಪಾವತಿ ವಿಷಯಗಳ ಬಗ್ಗೆ ಸರ್ಕಾರ ಗಂಭೀರ ಚರ್ಚೆ ನಡೆಸುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ದಿನವಿಡೀ ವಿಧಾನಸೌಧದಲ್ಲೇ ತುರ್ತು ಸಭೆಗಳಲ್ಲಿ ನಿರತರಾಗಿದ್ದಾರೆ.
ರಾಜಣ್ಣ ಅವರ ಔತಣಕೂಟಕ್ಕೆ ಸಿಎಂ ಗೈರು
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ತುಮಕೂರು ನಿವಾಸದಲ್ಲಿ ಸಿಎಂಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ನಾಟಿ ಕೋಳಿ ಸಾರು, ಮುದ್ದೆ ಊಟದ ಜೊತೆಗೆ ವೆಜ್ ಊಟದ ಸಿದ್ದತೆ ಮಾಡಲಾಗಿತ್ತು.
ರಾಜಣ್ಣ ಮನೆಗೆ ಬಂದಿದ್ದ ನಾಯಕರಿಗೆ ನಿರಾಸೆ
ಈ ಔತಣ ಕೂಟಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಡಾ.ಜಿ. ಪರಮೇಶ್ವರ್, ಎಂ.ಸಿ. ಸುಧಾಕರ್, ಶಾಸಕರಾದ ಹೆಚ್.ವಿ. ವೆಂಕಟೇಶ್, ಷಡಕ್ಷರಿ, ಸುರೇಶ್ ಬಾಬು ಸೇರಿದಂತೆ ಪ್ರಮುಖ ನಾಯಕರು ರಾಜಣ್ಣ ಅವರ ನಿವಾಸಕ್ಕೆ ಆಗಮಿಸಿದ್ದರು.
ಎಲ್ಲರೂ ಸಿಎಂ ಬರುವ ನಿರೀಕ್ಷೆಯಲ್ಲಿ ಔತಣ ಕೂಟಕ್ಕಾಗಿ ಕಾಯುತ್ತಿದ್ದರು. ಆದರೆ ಸಿಎಂ ಆಗಮನ ಸಾಧ್ಯವಾಗದೇ ಜಿಲ್ಲೆಯ ನಾಯಕರ ನಿರೀಕ್ಷೆ ಹುಸಿಯಾಯಿತು.
MUST WATCH: CM SIDDU TUMKUR VISIT CANCELLED | CM ಸಿದ್ದರಾಮಯ್ಯ ತುಮಕೂರು ಪ್ರವಾಸ ರದ್ದು




