
ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ ಅವರು, ಪ್ಯಾನ್ ಇಂಡಿಯಾ ಮಟ್ಟದ ಭಾರೀ ನಿರೀಕ್ಷೆಯ ಚಿತ್ರ “ಕಲ್ಕಿ 2898 AD” ಚಿತ್ರದ ಮೊದಲ ಭಾಗದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಇದೀಗ ಈ ಸಿನಿಮಾ ಸೀಕ್ವೆಲ್ (ಪಾರ್ಟ್ 2) ಗೆ ಅವರ ಪಾತ್ರ ಕಟ್ ಆಗಿರುವ ಮಾಹಿತಿ ಹೊರಬಿದ್ದಿದೆ.
ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಮುಂದಿನ ಭಾಗದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ದೀಪಿಕಾ ಈ ಚಿತ್ರದಲ್ಲಿ ಗರ್ಭಿಣಿಯಾಗಿ ಭವಿಷ್ಯದ ದೇವಮಾನವ ಕಲ್ಕಿಯನ್ನು ಜನ್ಮ ನೀಡುವ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಆದರೆ, 2ನೇ ಭಾಗಕ್ಕೆ ದೀಪಿಕಾ ಹೆಚ್ಚುವರಿ ಸಂಭಾವನೆ ಕೇಳಿರುವುದರಿಂದ, ನಿರ್ಮಾಪಕರು ಅವರನ್ನು ಚಿತ್ರದಿಂದ ಹೊರಗಿಟ್ಟಿದ್ದಾರೆಎಂಬ ಸುದ್ದಿ ಹೊರಬಿದ್ದಿದೆ.
ದೀಪಿಕಾ ಪಡುಕೋಣೆ ಪಾರ್ಟ್ 2 ಗೆ ಪಾರ್ಟ್ 1 ಗಿಂತ ದುಪ್ಪಟ್ಟು ಸಂಭಾವನೆ ಕೇಳಿದ್ದಾರೆ ಎನ್ನಲಾಗ್ತಿದೆ. ಚಿತ್ರತಂಡ ಈ ಬಜೆಟ್ ಹೆಚ್ಚಳವನ್ನು ನಿರಾಕರಿಸಿದ ಪರಿಣಾಮ, ಪಾತ್ರವೇ ಬೇರೆ ನಟಿಯೊಬ್ಬರಿಗೆ ಹಸ್ತಾಂತರ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಚಿತ್ರತಂಡ ಇನ್ನೂ ಅಧಿಕೃತ ಘೋಷಣೆ ನೀಡಿಲ್ಲದಿದ್ದರೂ, ಮೂಲಗಳ ಮಾಹಿತಿ ಪ್ರಕಾರ ಈ ನಿರ್ಧಾರ ಗಟ್ಟಿಯಾಗಿರುವುದಾಗಿ ತಿಳಿದುಬಂದಿದೆ.
ದೀಪಿಕಾ ಪಡುಕೋಣೆ ಅವರನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂದಿನ ಸಿನಿಮಾ ʼಸ್ಪಿರಿಟ್’ನಿಂದಲೂ ಹೊರಗಿಟ್ಟಿದ್ದರು. ಇದರಿಂದಾಗಿ ದೀಪಿಕಾ ಇತ್ತೀಚೆಗೆ ಟಾಲಿವುಡ್ (Tollywood) ಚಿತ್ರಗಳ ಜೊತೆಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.





