Chikkanayakanahalli: ಹೊಯ್ಸಳಗಟ್ಟೆ–ಬೆಳ್ಳಾರ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬುಕ್ಕಾಪಟ್ಟಣ ಗ್ರಾಮದ ದುರ್ಗಮ್ಮ ಪೂಜಾರಿ ಶಿವಣ್ಣ (62) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Chikkanayakanahalli : ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ತಂದೆ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗನಿಗೆ ಗಂಭೀರ ಗಾಯಗಳಾಗಿರುವ ಘಟನೆ ಹೊಯ್ಸಳಗಟ್ಟೆ- ಬೆಳ್ಳಾರ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.
ಪೆಟ್ರೋಲ್ ಬಂಕ್ ಹತ್ತಿರ ಭೀಕರ ಅಪಘಾತ
ಇನ್ನು ಅಪಘಾತದಲ್ಲಿ ಬುಕ್ಕಾಪಟ್ಟಣ ಗ್ರಾಮದ ದುರ್ಗಮ್ಮ ಪೂಜಾರಿ ಶಿವಣ್ಣ (62) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೃತ ಶಿವಣ್ಣ ಅವರು ಮಗ ಗಂಗಾಧರ್ಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಮೃತ ಶಿವಣ್ಣ ಅವರು ತಮ್ಮ ಮಗ ಗಂಗಾಧರ್ ಜೊತೆ ದಸೂಡಿ ಗ್ರಾಮಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳಿ, ವಿಧಿ ವಿಧಾನ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ: Accident: ಕಳ್ಳಂಬೆಳ್ಳ ಬಳಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಇಬ್ಬರ ಸಾವು..!
ಸಂಬಂಧಿಕರ ಅಂತ್ಯಕ್ರಿಯೆಯಿಂದ ಮನೆಗೆ ವಾಪಸ್ಸಾಗುತ್ತಿದ್ದಾಗ ದುರಂತ
ಬೆಳ್ಳಾರ ಮತ್ತು ಬುಕ್ಕಾಪಟ್ಟಣ ಮಧ್ಯೆ ಇರುವ ಪೆಟ್ರೋಲ್ ಬಂಕ್ ಹತ್ತಿರ ಬಡಕೆಗುಡ್ಲು ದಿಕ್ಕಿನಿಂದ ಬಂದ ಕಾರು, ಅವರು ಹೋಗುತ್ತಿದ್ದ ಬೈಕಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಸ್ಥಳದಲ್ಲೇ ತಂದೆ ಸಾವು, ಮಗನಿಗೆ ಗಂಭೀರ ಗಾಯ..!
ಅಪಘಾತದಲ್ಲಿ ತಂದೆ ಶಿವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ಗಂಗಾಧರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ವಿಷಯ ತಿಳಿದ ಕೂಡಲೇ ಹುಳಿಯಾರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾರೆ. ಸದ್ಯ ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH: CHIKKANAYAKANAHALLI | ಸಾಲ್ಕಟ್ಟೆ ಕ್ರಾಸ್ ಬಳಿ KSRTC BUS ಪಲ್ಟಿ- 21 ಜನರಿಗೆ ಗಂಭೀರ ಗಾಯ




