Political News: ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ ನಡೆಯಲ್ಲ, ಬದಲಾಗಿ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೇ ಅಧಿಕಾರಕ್ಕೆ ಬರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Political News: ರಾಜ್ಯದಲ್ಲಿ “ನವೆಂಬರ್ ಕ್ರಾಂತಿ” ಎಂಬ ಯಾವುದೇ ಬೆಳವಣಿಗೆಯಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 2028ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮರಳುವುದು ನಿಜವಾದ ಕ್ರಾಂತಿ ಆಗಲಿದೆ ಎಂದು ಘೋಷಿಸಿದ್ದಾರೆ.
“ನವೆಂಬರ್ ಕ್ರಾಂತಿ” ವದಂತಿ ಮಾತ್ರ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ
ದೆಹಲಿ ಭೇಟಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್ ಅವರು, “ನವೆಂಬರ್ ಕ್ರಾಂತಿ ಅಂತಾ ಯಾರಾದರೂ ಹೇಳಿದ್ದರೆ ಅದು ವದಂತಿ ಮಾತ್ರ. ನಾಯಕತ್ವ ಬದಲಾವಣೆ ಆಗುತ್ತೆ ಅಂತಾ ಸಿಎಂ ಸಿದ್ದರಾಮಯ್ಯ ಅಥವಾ ನಾನು ಹೇಳಿದ್ದೀವಾ? ಇಲ್ಲ,”
ಹೈಕಮಾಂಡ್ನ ನಿರ್ಧಾರವೇ ಅಂತಿಮ ನಿರ್ಧಾರ
“ಐದು ವರ್ಷವಾಗಲಿ, ಹತ್ತು ವರ್ಷವಾಗಲಿ, ಹದಿನೈದು ವರ್ಷವಾಗಲಿ — ನಾಯಕತ್ವ ಕುರಿತು ಹೈಕಮಾಂಡ್ ಹೇಗೆ ನಿರ್ಧರಿಸುತ್ತದೆ ಅಷ್ಟೆ ನಾವು ನಡೆದುಕೊಳ್ಳುತ್ತೇವೆ. ಪಕ್ಷದ ಚೌಕಟ್ಟನ್ನು ಬಿಟ್ಟು ನಾನು ಎಂದೂ ಹೋಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನವೆಂಬರ್ನಲ್ಲಿ ಕಾಂಗ್ರೆಸ್ ‘ಕ್ರಾಂತಿ’ -ಸಿಎಂ ಬಣದಲ್ಲಿ ಚದುರಂಗದ ಹೊಸ ಆಟ ಆರಂಭ..!
ಹೈಕಮಾಂಡ್ ಭೇಟಿ ಮತ್ತು ಸಂಪುಟ ವಿಚಾರ
ಇನ್ನು ದೆಹಲಿ ಭೇಟಿ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿಯಾದ ವಿಚಾರಕ್ಕೂ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್ ಅವರು, “ಪಕ್ಷ ಸಂಘಟನಾ ವಿಚಾರಗಳ ಕುರಿತು ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ. ಸಂಪುಟದ ವಿಷಯದ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ,” ಎಂದು ಹೇಳಿದ್ದಾರೆ.
ಪಥಸಂಚಲನ ಮತ್ತು ಕಾನೂನು ವಿಚಾರ
“ಆರ್ಎಸ್ಎಸ್ ಆಗಲಿ ಅಥವಾ ಯಾರೇ ಆಗಲಿ ಅನುಮತಿ ಪಡೆದುಕೊಂಡು ಕಾರ್ಯಕ್ರಮ ನಡೆಸಿಕೊಳ್ಳಲಿ ಎಂಬುದೇ ನಮ್ಮ ನಿಲುವು. ಜಗದೀಶ ಶೆಟ್ಟರ್ ನೀಡಿದ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ. ಹೈಕೋರ್ಟ್ ವಿಚಾರಣೆ ನಮ್ಮ ಕಾನೂನು ತಂಡ ನೋಡಿಕೊಳ್ಳಲಿದೆ,” ಎಂದು ಹೇಳಿದ್ದಾರೆ.
MUST WATCH: KANAKAPURAದ ಬಂಡೆ CM ಕನಸು ನನಸಾಗುತ್ತಾ? – CONGRESS ಕೈ ಕೊಟ್ರೆ ಕಮಲ ಹಿಡಿತಾರಾ




