BENGALURU : ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಆಗುತ್ತೇ ಅಂತ ಹೇಳಲಾಗ್ತಿದೆ. ಆದ್ರೆ ಇದು ಸಚಿವರು, ಶಾಸಕರ ತಲೆಗಂತೂ ಹುಳ ಬಿಟ್ಟಂತಾಗಿದ್ದು, ಇದರ ಮಧ್ಯೆ ಸಚಿವ ಸ್ಥಾನದಿಂದ ಉಚ್ಛಾಟನೆಗೊಂಡಿರೋ ಕೆ.ಎನ್. ರಾಜಣ್ಣ ಜೊತೆ ಸೇರಿ ಸಿಎಂ ಮತ್ತೊಂದು ದಾಳ ಉರುಳಿಸಿದ್ದಾರೆ.

BENGALURU: ಕೆಲ ತಿಂಗಳ ಹಿಂದೆ ಕ್ರಾಂತಿಯ ಘೋಷಣೆ ನೀಡಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿದ್ದ ಹೇಳಿಕೆ ಇದೀಗ ನಿಜವಾಗಿಯೂ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ನವೆಂಬರ್ ಹತ್ತಿರವಾಗುತ್ತಿದ್ದಂತೆ, ರಾಜ್ಯ ಕಾಂಗ್ರೆಸ್ನಲ್ಲಿ ಕುತೂಹಲ ಗರಿಗಟ್ಟಿದೆ.
ಇನ್ನು ಪಕ್ಷದ ಒಳಾಂಗಣದಲ್ಲಿ “ತೆರೆ-ಮರೆ ಆಟ” ತೀವ್ರಗೊಳ್ಳುತ್ತಿದ್ದರೆ, ಇತ್ತ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಈ ರಾಜಕೀಯ ಸಂಚಲನದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲೂ ಮತ್ತೊಂದು ಕ್ರಾಂತಿಯ ಸುಳಿವು ಸಿಕ್ಕಿದೆ ಎನ್ನುವ ಮಾತು ಕೇಳಿಬರುತ್ತಿದೆ.
ನವೆಂಬರ್ ಮಧ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಡೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಮುಂದೆ ಕುರ್ಚಿ ರಾಜಕೀಯಕ್ಕೆ ಸಂಬಂಧಿಸಿದ ತಮ್ಮ ವಾದ ಮಂಡಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಶಕ್ತಿಪ್ರದರ್ಶನ, ತಂತ್ರಬದಲಾವಣೆ, ಮತ್ತು ಬಣಪಕ್ಷೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಇದನ್ನೂ ಓದಿ: BENGALURU METRO: ನವೆಂಬರ್ 1ರಿಂದ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಇದರ ಮಧ್ಯೆ ಸಚಿವ ಸ್ಥಾನ ಕಳೆದುಕೊಂಡಿದ್ದರೂ, ಸಿಎಂ ಬಣದ ಆಪ್ತನಾಗಿ ಗುರುತಿಸಿಕೊಂಡಿರುವ ಕೆ.ಎನ್. ರಾಜಣ್ಣ ಜೊತೆ ಸಿದ್ದರಾಮಯ್ಯ ಹೊಸ ಚದುರಂಗದ ಆಟಕ್ಕೆ ಕೈ ಹಾಕಿದ್ದಾರೆ. ಡಿನ್ನರ್ ನೆಪದಲ್ಲಿ ಆಯೋಜಿಸಲಾದ ವಿಶೇಷ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿದ್ದು, ರಾಜಣ್ಣ ಪರ ನಿಂತಿರುವ ತಮ್ಮ ನಿಲುವು ಸ್ಪಷ್ಟಪಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡ ರಾಜಣ್ಣಗೆ ಸಿದ್ದರಾಮಯ್ಯ ನೀಡುತ್ತಿರುವ ಬೆಂಬಲದಿಂದ ಪಕ್ಷದ ಒಳಗಿನ ಬಣ ರಾಜಕೀಯ ಮತ್ತಷ್ಟು ಬಿಸಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.
MUST WATCH: ಮತ್ತೆ ಹೆಚ್ಚಾಯ್ತು ಕನ್ನಡ ನಾಮಫಲಕದ ಕಿಚ್ಚು – ಕಡ್ಡಾಯ ನಾಮಫಲಕ ಹಾಕುವಂತೆ ಒತ್ತಾಯ | TUMAKURU NEWS |




