BENGALURU METRO: ಬೆಂಗಳೂರಿನ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಸಂಚರಿಸುವ ಯೆಲ್ಲೋ ಲೇನ್ ನಲ್ಲಿ ನವಂಬರ್ 1 ರಿಂದ ಐದನೇ ಮೆಟ್ರೋ ಟ್ರೇನ್ ಸಂಚರಿಸಲಿದೆ. ಇದರಿಂದ ಮೆಟ್ರೋ ಟ್ರೇನ್ ಗಳ ಸಂಚಾರದ ನಡುವಿನ ಸಮಯ 15 ನಿಮಿಷಕ್ಕೆ ಇಳಿಯಲಿದೆ. ಯೆಲ್ಲೋ ಲೇನ್ ಮಾರ್ಗವು ಬೆಂಗಳೂರಿನ ಟೆಕ್ ಕಾರಿಡಾರ್ ಆಗಿದೆ.

BENGALURU METRO: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದನ್ನ ನೀಡಿದೆ ಬಿಎಂಆರ್ಸಿಎಲ್ (BMRCL). ಈಗಾಗಲೇ ಆರ್.ವಿ. ರಸ್ತೆ (R.V. Road)ದಿಂದ ಬೊಮ್ಮಸಂದ್ರ (Bommasandra)ವರೆಗೂ ಸಂಚರಿಸುತ್ತಿರುವ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನವೆಂಬರ್ 1ರಿಂದ ಐದನೇ ಮೆಟ್ರೋ ರೈಲು ಸಂಚಾರಕ್ಕೆ ಬರುತ್ತಿದೆ.
ಇನ್ನು ಈ ಮಾರ್ಗದಲ್ಲಿ ಕೇವಲ ನಾಲ್ಕು ಮೆಟ್ರೋ ಟ್ರೇನ್ಗಳು ಮಾತ್ರ ಓಡುತ್ತಿದ್ದು, ಬೋಗಿಗಳ ಕೊರತೆಯಿಂದ ಪ್ರಯಾಣಿಕರಿಗೆ ಹೆಚ್ಚು ನಿರೀಕ್ಷಿಸಬೇಕಾಗುತ್ತಿತ್ತು. ಈಗ ಐದನೇ ರೈಲು ಸೇರ್ಪಡೆಯಾದ ಬಳಿಕ ಪ್ರತಿ ರೈಲಿನ ನಡುವೆ ಇರುವ 19 ನಿಮಿಷಗಳ ಅಂತರವು 15 ನಿಮಿಷಕ್ಕೆ ಇಳಿಯಲಿದೆ. ಇದು ಪ್ರಯಾಣಿಕರ ಸಮಯ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇದನ್ನೂ ಓದಿ: Ind vs Aus T20I: ಭಾರತ – ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ಮಳೆಗೆ ಬಲಿ!
ಐದನೇ ರೈಲಿನ ಸುರಕ್ಷತಾ ಹಾಗೂ ತಾಂತ್ರಿಕ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನವೆಂಬರ್ 1ರಂದು ಈ ರೈಲು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಈ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10, 2024 ರಂದು ಉದ್ಘಾಟಿಸಿದ್ದರು. ಆರಂಭದಲ್ಲಿ ಮೂರು ರೈಲುಗಳಷ್ಟೇ ಸಂಚಾರದಲ್ಲಿದ್ದು, ಪ್ರತಿ 25 ನಿಮಿಷಕ್ಕೊಮ್ಮೆ ಓಡುತ್ತಿದ್ದವು. ಬಳಿಕ ಸೆಪ್ಟೆಂಬರ್ 10ರಂದು ನಾಲ್ಕನೇ ರೈಲು ಸೇರ್ಪಡೆಗೊಂಡು ಅಂತರವನ್ನು 19 ನಿಮಿಷಕ್ಕೆ ಇಳಿಸಿತ್ತು. ಈಗ ಐದನೇ ರೈಲು ಸೇರ್ಪಡೆಯಿಂದ ಯೆಲ್ಲೋ ಲೈನ್ ಸಂಚಾರ ಮತ್ತಷ್ಟು ಸುಗಮವಾಗಲಿದೆ.
MUST WATCH: CHIKKABALLAPURA | ಮಳೆಯ ಆರ್ಭಟಕ್ಕೆ ಲಕ್ಷಾಂತರ ರೂ ಬೆಳೆ ಕಳೆದುಕೊಂಡು ರೈತರ ಗೋಳು




