Ind vs Aus T20I: ಭಾರತ ಮತ್ತು ಆಸ್ಟ್ರೇಲಿಯಾ (Ind vs AUS) ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮಳೆಯಾಟವೇ ಮೇಲಾಗಿದೆ. ನಿರಂತರ ಮಳೆ (Rain) ಸುರಿಯುತ್ತಿದ್ದ ಕಾರಣ ಇಂದಿನ ಪಂದ್ಯವನ್ನ ರದ್ದುಗೊಳಿಸಲಾಗಿದೆ.

Ind vs Aus T20I: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದ್ದು, ಆದರೆ ಮೊದಲನೇ ಪಂದ್ಯ ಮಳೆಗೆ ಬಲಿಯಾಗಿದೆ.
ಕ್ಯಾನ್ಬೆರಾದ ಮನುಕಾ ಓವಲ್ ಮೈದಾನದಲ್ಲಿ ಟಾಸ್ ಸೋತ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ಗೆ ಇಳಿದು ಕೇವಲ 35 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. 5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸುತ್ತಿದ್ದಾಗಲೇ ಮಳೆ ಆರಂಭವಾಯಿತು.
ಇನ್ನು ಮಳೆಬಿಟ್ಟ ನಂತರ ಆಟ ಪುನರಾರಂಭವಾದರೂ, ಮಳೆ ಮತ್ತೆ ಅಡ್ಡಿಪಡಿಸಿತು. ಆ ವೇಳೆಗೆ ಬ್ಯಾಟಿಂಗ್ ಮಾಡುತ್ತಿದ್ದ ಶುಭ್ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಜೋಡಿ ಆಸೀಸ್ ಬೌಲರ್ಗಳನ್ನು ಎದುರಿಸಲು ಸಜ್ಜಾಗಿತ್ತು. 10ನೇ ಓವರ್ನ ಮೊದಲ ನಾಲ್ಕು ಎಸೆತಗಳಲ್ಲಿ ವೇಗಿ ನಾಥನ್ ಎಲಿಸ್ ವಿರುದ್ಧ ಸೂರ್ಯಕುಮಾರ್ 15 ರನ್ ಬಾರಿಸಿ ಭಾರತ ಬೃಹತ್ ಮೊತ್ತದ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ನಿರಂತರ ಮಳೆಯಿಂದಾಗಿ ಪಂದ್ಯವನ್ನು ಅಂತಿಮವಾಗಿ ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು.
ಇದನ್ನೂ ಓದಿ: BRAT Movie : ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರ ಅಕ್ಟೋಬರ್ 31 ರಂದು ತೆರೆಗೆ!
ಈಗ ಎರಡನೇ ಟಿ20 ಪಂದ್ಯ ಅಕ್ಟೋಬರ್ 31ರಂದು ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡೂ ತಂಡಗಳು ಜಯದೊಂದಿಗೆ ಸರಣಿಯಲ್ಲಿ ಮುನ್ನಡೆ ಪಡೆಯಲು ಎದುರು ನೋಡುತ್ತಿವೆ.
MUST WATCH : TUMAKURU | ಅನೈತಿಕ ಚಟುವಟಿಕೆಗಳ ತಾಣವಾಗ್ತಿದೆ ಶಿವನಗರ ಪಾರ್ಕ್ – ಸಾರ್ವಜನಿಕರ ಆಕ್ರೋಶ




