Karnataka Politics: ಜೋಳ ವ್ಯಾಪಾರಿಗೆ ವಂಚನೆ ಮಾಡಿದ ವ್ಯಕ್ತಿಯ ಪರವಾಗಿ ಜಮೀರ್ ಅಹ್ಮದ್ ಫೋನ್ ಕರೆ ಮಾಡಿದ್ದರು ಎಂಬ ಆರೋಪದಡಿ ಅವರ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೂರು ನೀಡಿದ್ದಾರೆ.

Karnataka Politics: ಮೆಕ್ಕೆಜೋಳ ಖರೀದಿಯಲ್ಲಿ ನಡೆದಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಂಚಕರ ಪರವಾಗಿದಾರೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ.
ಸಚಿವ ಜಮೀರ್ ಅಹ್ಮದ್ ವಿರುದ್ದ ರಾಜ್ಯಪಾಲರಿಗೆ ದೂರು!
ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿ, ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದ ಜೋಳದ ವ್ಯಾಪಾರಿ ರಾಮಕೃಷ್ಣಪ್ಪ ಅವರು ಹೈದರಾಬಾದ್ ಮೂಲದ ವ್ಯಾಪಾರಿ ಅಕ್ಬರ್ ಪಾಷಾ ವಿರುದ್ಧ 1.89 ಕೋಟಿ ರೂ. ವಂಚನೆ ಆರೋಪದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಆಧಾರದ ಮೇಲೆ ಪೊಲೀಸರು ಅಕ್ಬರ್ ಪಾಷಾವನ್ನು ಬಂಧಿಸಿದ್ದರು.
ಅಕ್ಬರ್ ಪಾಷಾ ಪರವಾಗಿ ಸಚಿವ ಜಮೀರ್ ಪೆರೇಸಂದ್ರ ಪಿಎಸ್ಐ ಜಗದೀಶ್ರೆಡ್ಡಿಗೆ ಕರೆಮಾಡಿ, “ಅವರು ನನ್ನ ಸಂಬಂಧಿ, ಸಹಾಯ ಮಾಡಿ, ಪ್ರಕರಣವನ್ನು ರಾಜಿ ಮಾಡಿಸಿ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ ಲೋಕಾಯುಕ್ತ ವಿಚಾರಣೆಗೆ ಸಚಿವ ಜಮೀರ್ ಅಹಮದ್ ಹಾಜರು!
ವಂಚಕರ ಪರ ಸಚಿವ! – ರೈತ ರಾಮಕೃಷ್ಣಪ್ಪ ಅಸಮಾಧಾನ
ಇನ್ನು ರಾಮಕೃಷ್ಣಪ್ಪ ಅವರು, “ಸಚಿವ ಜಮೀರ್ ಅಹ್ಮದ್ ಅವರು ರೈತರ ಪರವಾಗಿ ಮಾತನಾಡಿ ಆರೋಪಿಯಿಂದ ಹಣ ವಾಪಸ್ ಬರುವಂತೆ ಮಾಡಿ ನೆರವಾಗುವ ಬದಲು, ಬಂಧನವಾಗಿರುವ ಆರೋಪಿಗಳ ರಕ್ಷಣೆ ಮಾಡುವಂತೆ ಪಿಎಸ್ಐ ಅವರಿಗೆ ಪೋನ್ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಚಿವರಾಗಿದ್ದು, ವಂಚಕರ ಪರ ನಿಲ್ಲೋದಕ್ಕಾ..?
ಇನ್ನು “ನಾವು ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಮನೆಗೆ ಸಿಎಂ ಸಿದ್ಧರಾಮಯ್ಯ ಸಹ ಬಂದಿದ್ದಾರೆ. ನೀವು ನಮ್ಮ ಪಕ್ಷದ ಸಚಿವರಾಗಿದ್ದು, ವಂಚಕರ ಪರ ನಿಲ್ಲೋದಕ್ಕಾ?” ಎಂದು ರಾಮಕೃಷ್ಣಪ್ಪ ಪ್ರಶ್ನಿಸಿದ್ದಾರೆ.
ಸದ್ಯ ಈ ಘಟನೆ ರಾಜಕೀಯವಾಗಿ ಕಾವೇರಿದ್ದು, ರಾಜ್ಯಪಾಲರ ನಿರ್ಧಾರ ಮತ್ತು ಸರ್ಕಾರದ ಮುಂದಿನ ಕ್ರಮಗಳತ್ತ ರಾಜ್ಯದ ರಾಜಕೀಯ ವಲಯದ ಕಣ್ಣು ನೆಟ್ಟಿದೆ.
MUST WATCH: ಮಧ್ಯಸ್ಥಿಕೆ ವಹಿಸಲು ಹೋದ ಸಚಿವ ZAMEER AHMED ಕುರ್ಚಿಗೆ ಸುತ್ತಿಕೊಳ್ತಾ ಕಂಟಕ..? | CHIKKABALLAPURA NEWS |




